ಎಲ್ಪಿಜಿ ಉತ್ಪಾದನಾ ಕಂಪೆನಿಗಳು ಸರಕಾರದ ಸ್ವಾಧೀನದಲ್ಲಿಲ್ಲವೇ

ಏಕೆ ಈ ಪ್ರಶ್ನೆ ಅಂದರೆ ನಮಗೆ ಅಡುಗೆ ಅನಿಲ ಪೂರೈಸುವ ಕಂಪೆನಿಗಳಲ್ಲೊಂದಾದ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಇದೀಗ ತಮ್ಮ ಕೆಲವು ಗ್ರಾಹಕರ ರಿಫಿಲ್ ಸಿಲಿಂಡರುಗಳ ಮೇಲಿನ ಸಬ್ಸಿಡಿಯ ಹಣವನ್ನು ಅವರವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವುದರ ಬದಲು ಬೇರೆ ಯಾವುದೋ ಸಂಸ್ಥೆಗಳಲ್ಲಿ ಜಮಾ ಮಾಡುವುದಕ್ಕೆ ಶುರು ಮಾಡಿದೆ. ಎಲ್ಲಿ ಜಮಾ ಮಾಡುತ್ತಾರೆ. ಏನಂಥ ಗ್ರಾಹಕರಿಗೆ ಗೊತ್ತಾಗುವುದಿಲ್ಲ. ಆದರೆ ಗ್ಯಾಸ್ ಹಂಚಿಕೆದಾರರ ಕಂಪ್ಯೂಟರಿನಲ್ಲಿ ಮಾತ್ರ ನಮ್ಮ ಹಣ ಯಶಸ್ವಿಯಾಗಿ ವರ್ಗಾವಣೆಗೊಂಡಿರುವುದು ಕಂಡು ಬರುತ್ತದೆ. ತಮ್ಮ ಸಬ್ಸಿಡಿ ಹಣವನ್ನು ಎಲ್ಲಿ ಹೇಗೆ ಪಡೆಯುವುದು ಅಂತ ಗ್ರಾಹಕರಿಗೆ ಗೊತ್ತಾಗುವುದಿಲ್ಲ. ಡಿಸ್ಟ್ರಿಬ್ಯೂಟರನ್ನು ಕೇಳಿದರೆ ಸರಕಾರವನ್ನು ಕೇಳಿ ಇಲ್ಲವೇ ಕಂಪೆನಿಯವರನ್ನು ಕೇಳಿ ಎನ್ನುತ್ತಾರೆ. ಅಂತೂ ಗ್ರಾಹಕರ ಪಾಲಿಗೆ ಸಬ್ಸಿಡಿ ಇಲ್ಲವೆಂದಾಯಿತು ಗ್ರಾಹಕರ ಸಬ್ಸಿಡಿಯನ್ನು ಸರಕಾರದ ಅನುಮತಿ ಇಲ್ಲದೆ ಕಂಪೆನಿಯವರು ತಮ್ಮ ಇಚ್ಛೆಯಂತೆ ಯಾವುದೇ ಸಂಸ್ಥೆಯಲ್ಲಿ ಜಮಾ ಮಾಡುವ ಹಾಗಿಲ್ಲ. ಏಕೆಂದರೆ ಸಬ್ಸಿಡಿ ಕೊಡುವುದು ಸರಕಾರ. ಹಾಗಾದರೆ ಇದು ಸರಕಾರದ ಆದೇಶದಂತೆ ನಡೆದಿರುವುದು ಸ್ಪಷ್ಟ. ಸರಕಾರ ಏಕೆ ಇಂತಹ ನಾಟಕವಾಡುತ್ತಿದೆ, ಮೋದಿ ಸರಕಾರ ಬಂದಂದಿನಿಂದ ಸಬ್ಸಿಡಿ ಕಮ್ಮಿ ಮಾಡುತ್ತಲೇ ಬಂದಿದೆ. ನಾಲ್ಕು ವರ್ಷಗಳ ಹಿಂದೆ 200 ಶೇಕಡದಷ್ಟು ಇದ್ದ ಸಬ್ಸಿಡಿಯನ್ನು 15 ಶೇಕಡ ಇಳಿಸಿದೆ. ಮುಂದೆ ಈ ಸಬ್ಸಿಡಿಯನ್ನು ನಿಲ್ಲಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ ಸಬ್ ಕಾ ವಿಕಾಸ್ ಎಂದು ಈ ಸರ್ಕಾರ ಹೇಳುತ್ತದ್ದಾದರೂ ವಿಕಾಸ ಆಗುವುದು ಮಾತ್ರ ದೊಡ್ಡ ಉದ್ಯೋಗಪತಿಗಳದ್ದು ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ ಇಷ್ಟೇ ಅಲ್ಲ ಈ ಸರಕಾರ ಯಾವುದೇ ಘೋಷಣೆಗಳು ಈಡೆರುವಂಥದ್ದಲ್ಲ

  • ತುಕರಾಮ ಕೊಂಚಾಡಿ
    ಪೆರ್ಲಗುರಿ  ಮಂಗಳೂರು