ಮೋದಿ ಭಾಷಣ ಕೇಳಿದರೆ ಮಾತ್ರ ಗ್ಯಾಸ್ ಬುಕ್ಕಿಂಗ್ !

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ದೇಶದಲ್ಲಿ ಹಲವು ಇಲಾಖೆಗಳಿಗೆ ನಾವು ಟೋಲ್ ಫ್ರೀ ನಂಬರ್ ಮೂಲಕ ಉಚಿತ ಕರೆ ಮಾಡಬಹುದು. ಮೊಬೈಲ್ ಕಂಪನಿಗಳು, ಡಿಟಿಎಚ್ ಕಂಪನಿಗಳು ಸೇರಿದಂತೆ ನೂರಾರು ವಿವಿಧ ಸೇವೆಗಳಿಗೆ ನಾವು ಉಚಿತ ಕರೆ ಮಾಡಬಹುದಾಗಿದೆ. ಆದರೆ ನಾವು ನಿತ್ಯ ಉಪಯೋಗಿಸುವ ಎಚ್ ಪಿ ಗ್ಯಾಸ್ (ಅಡುಗೆ ಅನಿಲ) ಬುಕ್ ಮಾಡಬೇಕಾದರೆ ರೂ 3.50 ರೂ ಪಾವತಿ ಮಾಡಬೇಕು !.

ಹೌದು, ನಾವು ಗ್ಯಾಸ್ ಬುಕ್ ಮಾಡುವ ನಂಬರಿಗೆ ಕರೆ ಮಾಡಿದರೆ ಮೊದಲು ಕೇಳಿ ಬರುವ ಶಬ್ದ ಪ್ರಧಾನಿ ಮೋದಿಯವರ ಭಾಷಣ. ಭಾಷಣ ಮುಗಿದ ಬಳಿಕ ನಾವು ಗ್ಯಾಸ್ ಬುಕ್ ಮಾಡಬಹುದಾಗಿದೆ. ಎಲ್ಲವೂ ಮುಗಿಯುವಾಗ ನಿಮ್ಮ ಮೊಬೈಲಿನಿಂದ ರೂ 3.50 ಕಟ್ ಆಗುತ್ತದೆ. ಕರೆ ಶುಲ್ಕ ಅಧಿಕ ಇದ್ದವರಿಗೆ ಅಧಿಕ ಹಣ ಕಟ್ ಆಗುತ್ತದೆ.

ಗ್ಯಾಸ್ ಬುಕ್ ಮಾಡುವ ಮಂದಿ ಭಾಷಣ ಕೇಳಿಬೇಕೇ, ಅದೇ ಭಾಷಣವನ್ನು ರೇಡಿಯೋ ಮೂಲಕ ಕೇಳಿಸಬಹುದಲ್ಲವೇ, ಮೋದಿ ಭಾಷಣವನ್ನು ಕಡ್ಡಾಯವಾಗಿ ಕೇಳಬೇಕು ಎನ್ನುವುದಾದರೆ ಸರಕಾರವೇ ಕರೆಯನ್ನು ಉಚಿತವಾಗಿ ನೀಡಬಹುದಲ್ಲವೇ ?

ಮೋದಿಯ ಭಾಷಣಕ್ಕಾಗಿ ದೇಶದ ಪ್ರತೀ ಕುಟುಂಬ ಹಣ ಪಾವತಿ ಮಾಡಲೇಬೇಕು, ಇಲ್ಲವಾದರೆ ಅಡುಗೆ ಅನಿಲವಿಲ್ಲ. ಈಗಾಗಲೇ ಅಡಿಗೆ ಅನಿಲ ದರ ಏರಿಕೆಯಿಂದ ರೋಸಿ ಹೋಗಿರುವ ಬಡ ಕುಟುಂಬಗಳಿಗೆ ಮೋದಿಯ ಭಾಷಣದಿಂದ ಮೊಬೈಲಿನಲ್ಲಿರುವ ಹಣ ಕಳೆದುಕೊಳ್ಳಬೇಕಾಗಿ ಬಂದಿರುವುದು ದುರಂತ.