`ಜ ಲೋಯಾ ಹೃದಯಾಘಾತದಿಂದ ಸತ್ತಿಲ್ಲ ‘

ಖ್ಯಾತ ಫೊರೆನ್ಸಿಕ್ ತಜ್ಞ

ನವದೆಹಲಿ : ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ  ಬೃಜಗೋಪಾಲ್ ಹರಕಿಶನ್ ಲೋಯಾ ಶಂಕಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ.

ಲೋಯಾ ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದರೆಂಬ ಅಧಿಕಾರಿಗಳ ವಾದವನ್ನು  ಭಾರತದ ಖ್ಯಾತ ಫೊರೆನ್ಸಿಕ್ ತಜ್ಞರಾದ ಡಾ ಆರ್ ಕೆ ಶರ್ಮ ಅಲ್ಲಗಳೆದಿದ್ದಾರೆ. ಲೋಯಾ ಅವರು ಮೆದುಳಿಗೆ ಉಂಟಾದ  ಹಾನಿಯಿಂದ  ಅಥವಾ ಸಂಭಾವ್ಯ ವಿಷಪ್ರಾಶನದಿಂದ ಸಾವನ್ನಪ್ಪಿರಬಹುದು ಎಂದು ಲೋಯಾ ಅವರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದಾಗ ಕಂಡುಬರುತ್ತಿದೆ ಎಂದು ಡಾ ಶರ್ಮ ಹೇಳುತ್ತಾರೆ. ಡಾ ಶರ್ಮ ಅವರು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಫೊರೆನ್ಸಿಕ್ ಎಂಡ್ ಟಾಕ್ಸಿಕಾಲಜಿ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದಾರಲ್ಲದೆ  22 ವರ್ಷಗಳ ಕಾಲ ಇಂಡಿಯನ್ ಅಸೋಸಿಯೇಶನ್ ಆಫ್

ಮೆಡಿಕೋ-ಲೀಗಲ್ ಎಕ್ಸಪಟ್ರ್ಸ್ ಇದರ ಅಧ್ಯಕ್ಷರೂ ಆಗಿದ್ದಾರೆ.

`ದಿ ಕ್ಯಾರವಾನ್’ ಮ್ಯಾಗಜೀನ್ ಜತೆ ಮಾತನಾಡಿದಾಗ ಶರ್ಮ ಮೇಲಿನಂತೆ ತಿಳಿಸಿದ್ದಾರೆ. ಆವರು  ಲೋಯಾ ಅವರ ಪೋಸ್ಟ್ ಮಾರ್ಟಂ ವರದಿ ಹಾಗೂ ಇತರ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ್ದರು. ರಾಸಾಯನಿಕ ವಿಶ್ಲೇಷಣೆಗಾಗಿ ನೀಡಲಾಗಿದ್ದ ಕೆಲವೊಂದು ಸ್ಯಾಂಪಲ್ಲುಗಳ ವರದಿಯನ್ನೂ ಅವರು ಪರಿಶೀಲಿಸಿದ್ದರು. ಇವುಗಳಲ್ಲಿ ಕೆಲ ದಾಖಲೆಗಳನ್ನು ಆರ್ಟಿಐ  ಅರ್ಜಿಯ ಮೂಲಕ ಪಡೆಯಲಾಗಿದ್ದರೆ ಇನ್ನು ಕೆಲವು ಮಹಾರಾಷ್ಟ್ರ ಸರಕಾರವು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ದಾಖಲೆಗಳ ಪ್ರತಿಗಳಾಗಿತ್ತು.

ಲೋಯಾ ಸಾವಿನ ಬಗ್ಗೆ ಸಂಶಯಕ್ಕೆ ಆಸ್ಪದವಿಲ್ಲ ಎಂಬ ಮಹಾರಾಷ್ಟ್ರ ಸರಕಾರದ ವರದಿಯ ರಾಜ್ಯ ಗುಪ್ತಚರ ಇಲಾಖೆಯ ವರದಿಯನ್ನು ಪುಷ್ಟೀಕರಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

 

 

LEAVE A REPLY