ಪೊಲ್ಯ ಏರಿಯಾದಲ್ಲಿ ವೋಲ್ಟೇಜ್ ಸಮಸ್ಯೆ

ಉಡುಪಿ ತಾಲೂಕಿನ ಉಚ್ಚಿಲ ಪೇಟೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿರುವ ಪೊಲ್ಯ 2ನೇ ವಾರ್ಡಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳಿದ್ದು ಇಲ್ಲಿಯ ನಿವಾಸಿಗಳು ಲೋ ವೋಲ್ಟೇಜ್ ಸಮಸ್ಯೆಯಿಂದ ಕಂಗಾಲಾಗಿದ್ದಾರೆ ಸಂಜೆ 6 ಗಂಟೆ ನಂತರ ಇಲ್ಲಿಯ ವಿದ್ಯುತ್ ಬಲ್ಬುಗಳು ಚಿಮಣಿದೀಪದಂತೆ ಬೆಳಗುವ ದುರವಸ್ಥೆ ಒದಗಿಬಂದಿದೆ. ಇಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟು ಹೋಗುತ್ತಿದೆ. ಫ್ರಿಜ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಟ್ರಾನ್ಸ್‍ಫಾರ್ಮರಿಗಾಗಿ ಸ್ಥಳೀಯ ಶಾಸಕ ವಿನಯಕುಮಾರ್ ಸೊರಕೆಯಲ್ಲಿ ವಿನಂತಿಸಿದಾಗ ತಕ್ಷಣ ಸ್ಪಂದಿಸಿ ಟ್ರಾನ್ಸ್‍ಫಾರ್ಮರನ್ನು ತ್ವರಿತವಾಗಿ ಮಂಜೂರು ಮಾಡಿಸಿದಾಗ ಪೊಲ್ಯ ನಿವಾಸಿಗಳು ಸಂತೋಷಪಟ್ಟರು.
ಈ ಸಂತೋಷ ಹೆಚ್ಚು ದಿನ ಇರಲಿಲ್ಲ. ಶಾಸಕರೇನೋ ಪ್ರಯತ್ನ ಪಟ್ಟು ತ್ವರಿತವಾಗಿ ಮಂಜೂರು ಮಾಡಿಸಿದರೂ ಮೆಸ್ಕಾಂ ಅಧಿಕಾರಿಗಳು ಇನ್ನೂ ಸಂಪರ್ಕ ಕೊಟ್ಟಿಲ್ಲ. ಟ್ರಾನ್ಸಫಾರ್ಮರ್ ಅಳವಡಿಸಿ ಸುಮಾರು 2 ತಿಂಗಳು ಕಳೆದರೂ ಮೆಸ್ಕಾಂನವರ ಬೇಜವಾಬ್ದಾರಿಯಿಂದ ತೊಂದರೆಯೇ ಮುಂದುವರಿದಿದೆ. ಕಾಪು ಮೆಸ್ಕಾಂ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಟ್ರಾನ್ಸಫಾರ್ಮರಿಗೆ ಸಂಪರ್ಕ ಕೊಡಿಸಿ ಪೊಲ್ಯ ಗ್ರಾಮಸ್ಥರ ಸಮಸ್ಯೆ ಬಗೆಹರಿಸಬೇಕಾಗಿ ವಿನಂತಿ

  • ಪಿ ಪಿ ಅಬ್ದುಲ್ ಕರೀಮ್  ಪೊಲ್ಯ ಉಚ್ಚಿಲ

LEAVE A REPLY