ಪ್ರಥವiಗೆ ಮೈಸೂರು ಹುಡುಗಿ ಮೇಲೆ ಲವ್

ಕಳೆದ ವರ್ಷದ `ಬಿಗ್ ಬಾಸ್’ ವಿಜೇತ ಪ್ರಥಮ್ ವಿವಾದದ ಮೂಲಕವೇ ಸುದ್ದಿಯಲ್ಲಿದ್ದ. ಅದಲ್ಲದೇ ನಾಲ್ಕು  ಸಿನಿಮಾಗಳಿಗೆ ಆಯ್ಕೆಯಾಗಿರುವ ಪ್ರಥಮ್ ಈಗ ಲವ್ವಲ್ಲಿ ಬಿದ್ದಿದ್ದಾನೆ. ಆತನ ಮನಕದ್ದ ಹುಡುಗಿ ಮೈಸೂರಿನವಳಂತೆ.

ಪ್ರಥಮ್ ಪ್ರೇಮ್ ಕಹಾನಿ ಶುರುವಾಗಿ ಈಗ ಆರು ತಿಂಗಳಾಗಿದೆಯಷ್ಟೇ. `ನಮ್ಮದು ನಿಷ್ಕಲ್ಮಶ ಪ್ರೇಮ..’ ಎನ್ನುವ ಪ್ರಥಮ್ ತನ್ನ ಹುಡುಗಿ ಹೆಸರು ಮಾತ್ರ ಬಾಯ್ಬಿಟ್ಟಿಲ್ಲ. ಆಕೆ ಸಿನಿಮಾರಂಗದವಳಲ್ಲ. ಅವಳು ಇಂಜಿನಿಯರ್ ಪದವೀಧರೆ. “ನಾವು ಪ್ರತೀದಿನ ಗಂಟೆಗಟ್ಟಲೆ ಮಾತಾಡುತ್ತೇವೆ. ್ತಅವಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವಳು ಕೂಡ ನನ್ನನ್ನು ಇಷ್ಟಪಡುತ್ತಾಳೆ. ಅವಳದ್ದು ನನಗಿಂತ ಹೈಟ್ ಜಾಸ್ತಿ” ಎಂದು ಆಕೆ ಬಗ್ಗೆ ಉದ್ದುದ್ದ ಮಾತಾಡುತ್ತಾನೆ ಪ್ರಥಮ್.

ಸದ್ಯವೇ ಮದುವೆ ಇಲ್ಲದಿದ್ದರೂ ಸಂಕ್ರಾಂತಿ ಮುಗಿದ ಬಳಿಕ ಎಂಗೇಜ್ಮೆಂಟ್ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಹಿಂಟ್ ನೀಡಿದ್ದಾನೆ ಪ್ರಥಮ್.