ಮೈಕಾಸುರನ ಹಾವಳಿ ತಡೆಯಲು ನಗರ ಪೊಲೀಸ್ ಕಮಿಷನರ್ ಅಸಹಾಯಕರೇ

ಈಗಿನ ಮಂಗಳೂರು ಪೊಲೀಸ್ ಕಮಿಷನರ್ ಸುರೇಶ್ ಅವರು ಆಗೀಗ ಫೋನ್-ಇನ್ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಅಹವಾಲು ಕೇಳುತ್ತಿರುವುದು ಕಾಟಾಚಾರಕ್ಕೆಂಬಂತಿದೆ. ನಾಗರಿಕರು ವ್ಯಕ್ತಪಡಿಸುವ ದೂರು ದುಮ್ಮಾನಗಳಿಗೆ ಕ್ರಮ ಜರುಗಿಸುವುದಾಗಿ ಅವರು ಕಾರ್ಯಕ್ರಮದಲ್ಲಿ ಪ್ರಕಟಿಸುತ್ತಿದ್ದರೂ ಅವೆಲ್ಲ ತೋರುಗಾಣಿಕೆಗಾಗಿಯೇ ಇಂಥದೊಂದು ಅನುಮಾನ ಮಂಗಳೂರಿನ ರಾತ್ರಿಯಲ್ಲಿ ಅನಿರ್ಬಂಧಿತ ಲೌಡ್ ಸ್ಪೀಕರ್ ಬಳಸುತ್ತಿರುವುದನ್ನು ನಿಲ್ಲಿಸಲು ಪೊಲೀಸ್ ಅಧಿಕಾರಿಗಳು ವಿಫಲರಾಗುತ್ತಿರುವುದು ಸೂಚಿಸಿದೆ ನಿನ್ನೆ ಕರಾವಳಿ ಅಲೆ ಯಲ್ಲಿ ಎಡಿಟರ್ಸ್ ಪಿಕ್ ಅಂಕಣದಲ್ಲಿ ಪ್ರಕಟವಾದ ಬರಹ ನಗರದಲ್ಲಿ ಮೈಕಾಸುರನ ಹಾವಳಿ ಬಗ್ಗೆ ಒಂದು ಉದಾಹರಣೆ ಮಾತ್ರ. ಪ್ರತಿದಿನ ನಗರದ ಒಂದಲ್ಲ ಒಂದು ಕಡೆ ರಾತ್ರಿ ಕಾರ್ಯಕ್ರಮಗಳಲ್ಲಿ ಮೈಕ್ ಹಾವಳಿಯನ್ನು ತಡೆಗಟ್ಟುವಲ್ಲಿ ಪೊಲೀಸರು ಫೇಲ್ ಆಗಿದ್ದಾರೆ ರಾತ್ರಿ ಮೈಕ್ ಹಾವಳಿ ವಿರುದ್ಧ ಅವೆಷ್ಟೋ ನ್ಯಾಯಾಲಯಗಳು ಸುಪ್ರೀಂ ಕೋರ್ಟ್ ಸಮೇತ ತೀರ್ಪು ಕೊಟ್ಟಿದ್ದರೂ ಮಂಗಳೂರು ಪೊಲೀಸರಿಗೆ ಇದ್ಯಾವುದೂ ಲೆಕ್ಕಕ್ಕಿಲ್ಲವೇ ವಾಸ್ತವವಾಗಿ ಪೋಲೀಸರ ನಿರ್ಲಕ್ಷ್ಯ ನ್ಯಾಯಾಲಯದ ನಿಂದನೆ ಕೃತ್ಯವೂ ಹೌದು ಬೇಲಿಯೇ ಎದ್ದು ಹೊಲ ಮೇಯ್ದ ಪ್ರಸಂಗಗಳು ಇವು ಯಕ್ಷಗಾನವಿರಲಿ ಬೇರಾವುದೇ ಕಾರ್ಯಕ್ರಮವಿರಲಿ ರಾತ್ರಿ ಹೊತ್ತು ಮೈಕ್ ಬಳಸುವಂತೆಯೇ ಇಲ್ಲ ನಾಗರಿಕ ವಾಸದ ಸ್ಥಳಗಳಲ್ಲಿಯಂತೂ ರಾತ್ರಿಯಿಡೀ ಮೈಕ್ ಬಳಸಲು ಪೊಲೀಸರು ಅವಕಾಶ ಕೊಡುವುದು ಕಾನೂನುಬಾಹಿರ ಮಾತ್ರವಲ್ಲ ಸಮಾಜವಿರೋಧೀ ಕೃತ್ಯ ಎಷ್ಟೇ ರಾಜಕೀಯ ಒತ್ತಡವಿರಲಿ ಅಥವಾ ಕಾರಣ ಯಾವುದೇ ಇರಲಿ ರಾತ್ರಿಯಲ್ಲಿ ಪೊಲೀಸರು ಮೈಕ್ ಬಳಕೆಯನ್ನು ಅನುಮತಿಸುವಂತೆಯೇ ಇಲ್ಲ ಈ ನಿಯಮದ ಜಾರಿ ಬಗ್ಗೆ ಪೊಲೀಸರಿಗೆ ಸ್ಪಷ್ಟ ನಿರ್ದೇಶನಗಳಿವೆ ಅದನ್ನು ಶೃದ್ಧಾಪೂರ್ವಕವಾಗಿ ಜಾರಿಗೆ ತರಲು ಯಾವುದೂ ಪೊಲೀಸರಿಗೆ ಅಡ್ಡಿಯಾಗಬಾರದು ಈ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತರು ತನ್ನ ಅಧೀನ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ರವಾನಿಸಿ ಅದರ ಕಟ್ಟುನಿಟ್ಟು ಅನುಷ್ಠಾನವನ್ನು ಜಾರಿಗೆ ತರಬೇಕೆಂದು ಮಂಗಳೂರು ನಾಗರಿಕ ಸಮಾಜ ಬಯುಸುತ್ತದೆ

  • ರಮಾಕಾಂತ ಎಸ್  ಹೊಸಬೆಟ್ಟು ಮಂಗಳೂರು

LEAVE A REPLY