ದೀಪಿಕಾ ಡ್ರೆಸ್ ಬಗ್ಗೆ ಭಾರೀ ಕಮೆಂಟ್ಸ್

ದೀಪಿಕಾ ಪಡುಕೋಣೆ ಸದ್ಯವೇ ರಿಲೀಸ್ ಆಗಲಿರುವ `ತ್ರಿಬಲ್ ಎಕ್ಸ್, ರಿಟರ್ನ್ ಆಫ್ ಕ್ಸಾಂಡರ್ ಕೇಜ್’ ಚಿತ್ರದ ಪ್ರಮೋಶನ್ನಿನಲ್ಲಿ ತೊಡಗಿಕೊಂಡಿದ್ದು ಅಂತಹ ಸಂದರ್ಭದಲ್ಲಿ ಅವಳು ತೊಟ್ಟ ಒಂದು ಉಡುಗೆಯ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ದೀಪಿಕಾ ಮೊನ್ನೆ ಪ್ರೀಮಿಯರ್ ಶೋನಲ್ಲಿ ಮಿರಮಿರನೇ ಮಿಂಚುವ ಹೊಂಬಣ್ಣದ ಪ್ಲಂಗಿಂಗ್ ನೆಕ್‍ಲೈನ್ ಡ್ರೆಸ್ ಧರಿಸಿದ್ದಳು. ಆದ್ರೆ ಗೌನ್ ತುಂಬಾ ಲೋ ಕಟ್ ಫಿಟ್ ಆಗಿದ್ದರಿಂದ ಆಕೆಗೆ ಅದು ಗ್ಲಾಮರಸ್ ನೀಡುವ ಬದಲು ನೋಡುಗರಿಗೂ ಮುಜುಗರ ಉಂಟುಮಾಡುವ ಧಿರಿಸಾಗಿ ಕಾಣಿಸಿಕೊಂಡಿತು.
ಪ್ರೀಮಿಯರ್ ಶೋ ಮತ್ತು ಮೀಡಿಯಾ ಈವೆಂಟಿನಲ್ಲಿ ಚಿತ್ರದ ಹೀರೋ ವಿನ್ ಡೀಸೆಲ್ ಮತ್ತು ದೀಪಿಕಾ `ಲುಂಗಿ ಡ್ಯಾನ್ಸ್’ ಹಾಡಿಗೆ ಸ್ಟೆಪ್ ಹಾಕಿದಾಗ ದೀಪಿಕಾ ಡ್ರೆಸ್ ನೋಡುಗರಿಗೆ ಇನ್ನೂ ಹೆಚ್ಚು ದಿಗಿಲು ಮೂಡಿಸಿದೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿ ದೀಪಿಕಾ ಧರಿಸಿದ್ದ ಉಡುಗೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಉಡುಗೆ ಆಯ್ಕೆ ಬಗ್ಗೆ ಸ್ಫೂರ್ತಿದಾಯಕವಾಗಿದೆ ಎಂದರೆ, ಇನ್ನೂ ಹಲವರು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ. ಈ ಮೊದಲೂ ದೀಪಿಕಾ ಕ್ಲೀವೇಜ್ ಎದ್ದು ತೋರುವ ಡ್ರೆಸ್ ಧರಿಸಿ ಮೀಡಿಯಾದಲ್ಲಿ ಆ ಬಗ್ಗೆ ಕಮೆಂಟ್ಸ್ ಬಂದಾಗ ಸ್ವಲ್ಪ ಎಚ್ಚೆತ್ತುಕೊಂಡಿದ್ದಳು. ಈಗ ಅದ್ಯಾಕೆ ಅವಳು ಮತ್ತೆ ಅಂತದ್ದೇ ಸಾಹಸಕ್ಕಿಳಿದಳೋ ಅವಳಿಗೇ ಗೊತ್ತು.
ಪ್ರಿಯಾಂಕಾ ಚೋಪ್ರಾ ಇದೇ ರೀತಿಯ ಡ್ರೆಸ್ `ಗೋಲ್ಡನ್ ಗ್ಲೋಬ್’ ಫಂಕ್ಷನ್ನಿನಲ್ಲಿ ಧರಿಸಿದ್ದಳು. ವಿದೇಶೀ ನೆಲವಾದ್ದರಿಂದ ಯಾರೂ ಅಷ್ಟಾಗಿ ಆಕೆ ಡ್ರೆಸ್ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.