ಗಣಿ ಉತ್ಪನ್ನ ಸಾಗಿಸುತ್ತಿದ್ದ ಲಾರಿ ಕಾರಿಗೆ ಡಿಕ್ಕಿ, ಪವಾಡಸದೃಶ ಪಾರು

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಕೇರಳಕ್ಕೆ ಅಕ್ರಮವಾಗಿ ಗಣಿ ಉತ್ಪನ್ನಗಳನ್ನು ಸಾಗಾಟ ಮಾಡುತ್ತಿದ್ದ ಭಾರಿ ಗಾತ್ರದ ಲಾರಿ ಕಾರಿಗೆ ಡಿಕ್ಕಿ ಹೊಡೆದು ಮತ್ತೆ ರಾದ್ದಾಂತ ಸೃಷ್ಟಿಸಿದೆ.

11vittla6

ವಿಟ್ಲ ಮೂಲಕ ಸರಕು ಸಾಗಾಟದ ಘನ ವಾಹನಗಳ ಸಂಚಾರ ನಿಷೇಧಿಸಿದ್ದರೂ ಕ್ಯಾರೇ ಅನ್ನದ ಚಾಲಕರು ಮತ್ತೆ ಸಂಚರಿಸುತ್ತಿರುವುದು ರಾದ್ದಾಂತಕ್ಕೆ ಕಾರಣವಾಗಿದೆ. ಕೇರಳದಿಂದ ಗಣಿ ಉತ್ಪನ್ನಗಳನ್ನು ಸಾಗಾಟ ಮಾಡುತ್ತಿದ್ದ ಬೃಹತ್ ಲಾರಿಯೊಂದು ವಿಟ್ಲ ಸಮೀಪದ ಮೈರ ಪಡಿಬಾಗಿಲು ರಸ್ತೆ ತಿರುವಿನಲ್ಲಿ ಧರ್ಮಸ್ಥಳದಿಂದ ಹಿಂತಿರುಗುತ್ತಿದ್ದ ಬದಿಯಡ್ಕದ ಕಾರಿಗೆ ಡಿಕ್ಕಿ ಹೊಡೆದಿದೆ. ಅತೀ ವೇಗದಲ್ಲಿ ಧಾವಿಸಿ ಬಂದ ಬೃಹತ್ ಲಾರಿಯ ಹಿಂಭಾಗ ಚಾಲಕನ ನಿರ್ಲಕ್ಷ್ಯದಿಂದಾಗಿ ಕಾರಿಗೆ ಸಿಲುಕಿದ್ದರೂ ನಿಲ್ಲದೆ ಎಳೆದುಕೊಂಡು ಹೋಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು ಇನ್ನಾದರೂ ವಿಟ್ಲ ಮೂಲಕ ಘನ ವಾಹನಗಳ ಸಂಚಾರಕ್ಕೆ ಸಾರಿಗೆ ಇಲಾಖೆ ಶಾಶ್ವತವಾಗಿ ಬ್ರೇಕ್ ಹಾಕಬೇಕಿದೆ.