ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಲ್ಟಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಗೆ ಮಗುಚಿಬಿದ್ದ ಘಟನೆ ಪೆÇಸೋಟು ಪೆಟ್ರೋಲ್ ಪಂಪ್ ತಿರುವಿನಲ್ಲಿ ಗುರುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಸಂಭವಿಸಿದೆ.

ಕಾಞಂಗಾಡಿನಿಂದ ಮೀನು ತರಲು ಮಂಗಳೂರಿಗೆ ತೆರಳುತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಮೂವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಬೆಳಗ್ಗಿನ ಜಾವ ತುಂತುರು ಮಳೆ ಇದ್ದ ಕಾರಣ ಬ್ರೇಕ್ ಹಾಕುವಾಗ ನಿಯಂತ್ರಣ ತಪ್ಪಿರುವುದಾಗಿ ಚಾಲಕ ತಿಳಿಸಿದ್ದಾರೆ. ಇದೊಂದು ಅಪಘಾತ ವಲಯವಾಗಿದೆ. ಹಲವಾರು ವಾಹನಗಳು ಈ ತಿರುವಿನಲ್ಲಿ ಈಗಾಗಲೇ ಅಪಘಾತಕ್ಕೀಡಾಗಿವೆ. ರಸ್ತೆ ಬದಿಯಲ್ಲಿ ತಿರುವಿನ ಸೂಚನಾ ಫಲಕವನ್ನು ಅಳವಡಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.