ಓವರ್ಟೇಕ್ ಮಾಡಲು ಹೋಗಿ ಉರುಳಿದ ಲಾರಿ

ಸಾಂದರ್ಭಿಕ ಚಿತ್ರ

ಮಂಗಳೂರು : ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯೊಂದು ನೀರು ಸಾಗಾಟದ ಟ್ಯಾಂಕರನ್ನು ಓವರ್ಟೇಕ್ ಮಾಡುವ ಭರದಲ್ಲಿ ಉರುಳಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ನಡೆದಿದೆ.

ಲಾರಿ ಚಾಲಕ ಮತ್ತು ನಿರ್ವಾಹಕಗೆ ಗಾಯಗಳಾಗಿದ್ದು, ಆತನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ಬೆಳಿಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೇಲ್ಕಾರಿನಿಂದ ಕೊಣಾಜೆ ಕಡೆಗೆ ಮರ ಹೇರಿಕೊಂಡು ಹೋಗುತ್ತಿದ್ದ ಲಾರಿ ಎದುರಿನ ಟ್ಯಾಂಕರ್ ಲಾರಿಯನ್ನು ಓವರ್ಟೇಕ್ ಮಾಡಲು ಮುಂದಾಗಿ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಮಗುಚಿ ಬಿದ್ದಿದೆ. ರಸ್ತೆಯಲ್ಲಿ ಮರದ ದೊಡ್ಡ ದೊಡ್ಡ ತುಂಡುಗಳು ಬಿದ್ದಿದ್ದು ಬಳಿಕ ಕ್ರೇನ್ ತರಿಸಿ ಅವುಗಳನ್ನು ಪಕ್ಕಕ್ಕೆ ಸರಿಸಲಾಯಿತು.