ಒಬ್ಬ ಸ್ಪಾಟ್ ಡೆತ್, ಇನ್ನೊಬ್ಬ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ

ಮೃತ ಸಂತೋಷಕುಮಾರ್

ಲಾರಿ-ಕಾರು ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಲಾರಿ ಕಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಒಬ್ಬ ಸಾವನ್ನಪ್ಪಿ ಇನೊಬ್ಬ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಪಿಲಿಕ್ಕೋಡು ತೋಟಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ನೀಲೇಶ್ವರ ಪೂವಾಲಂ ಪುತ್ತರಿಯಡ್ಕ ಬಾಲಕೃಷ್ಣನ್ ಎಂಬವರ ಪುತ್ರ ಸಂತೋಷಕುಮಾರ್ (38) ಸಾವನ್ನಪ್ಪಿದ ದುರ್ದೈವಿ. ಕಾರಿನಲ್ಲಿದ್ದ ಪತ್ನಿಯ ಸಹೋದರ ಉಣ್ಣಿಕೃಷ್ಣನ್ (35) ಗಂಭೀರ ಗಾಯಗೊಂಡಿದ್ದು, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಇಬ್ಬರು ಪರಪ್ಪದಲ್ಲಿ ಹೊಸ ಸೂಪರ್ ಮಾರ್ಕೆಟ್ ಆರಂಭಿಸುವ ತಯಾರಿಯಲ್ಲಿದ್ದರು. ಈ ಸಂಬಂಧ ಕಾರಿನಲ್ಲಿ ಮಲಪ್ಪುರಂಗೆ ಹೋಗಿ ಹಿಂತಿರುಗುವ ದಾರಿಮಧ್ಯೆ ಅಪಘಾತ ಸಂಭವಿಸಿದೆ.