ಲಾರಿ ಮಗುಚಿ ಓರ್ವ ಜಖಂ

ಸಾಂದರ್ಭಿಕ ಚಿತ್ರ

ಸುಳ್ಯ : ಟೈಲ್ಸ್ ಹೇರಿಕೊಂಡು ಸುಳ್ಯದ ಮೂಲಕ ಕುಶಾಲನಗರಕ್ಕೆ ಹೋಗುತ್ತಿದ್ದ ಲಾರಿಯೊಂದು ಹೆದ್ದಾರಿಯ ನನ್ಯ ಎಂಬಲ್ಲಿ ಮಗುಚಿಬಿದ್ದು ಚಾಲಕ-ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಲಾರಿಯ ಮುಂಭಾಗ ನಜ್ಜು-ಗುಜ್ಜಾಗಿ ರಸ್ತೆಯಂಚಿನ ಹೊಡಕ್ಕೆ ಮಗುಚಿಬಿದ್ದಿದೆ. ಲಾರಿ ಚಾಲಕ ಕೈಲಾಸನಿಗೆ ಕೈ-ಕಾಲುಗಳಿಗೆ ಜಖಂ ಆಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾನೆ.