ಪುತ್ತೂರು ಜನರನ್ನು ಮಹಾಲಿಂಗೇಶ್ವರನೇ ಕಾಪಾಡಬೇಕು !

ಪುತ್ತೂರು ನಗರಸಭೆಯಲ್ಲಿ ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಲು ಲಕ್ಷ ಲಕ್ಷ ಹಣ ಲಂಚ ಪಡೆದು ಡೋರ್ ನಂಬರ್ ಪೌರಾಯುಕ್ತರು ನೀಡುತ್ತಿದ್ದಾರೆ ಎಂಬ ಸುದ್ದಿ ನಗರಸಭೆಯ ಪಡಶಾಲೆಯಿಂದ ಕೇಳಿ ಬರುತ್ತಿದೆ. ಪುತ್ತೂರು ಪುರಸಭೆ ಬಸ್ ತಂಗುದಾಣದ ಬಳಿ ಅಕ್ರಮವಾಗಿ ಕಟ್ಟಿರುವ ಕಟ್ಟಡಕ್ಕೆ ಹಿಂದಿನ ಪೌರಾಯುಕ್ತರು ಕಟ್ಟಡವನ್ನು ಕೆಡವುವಂತೆ ಷರಾ ಬರೆದಿರುತ್ತಾರೆ. ಕಟ್ಟಡವನ್ನು ಕೆಡವುವಂತೆ ಬರೆದಿರುವ ಹಾಳೆಯನ್ನು ತೆಗೆದು ಹರಿದು ಬಿಸಾಡಿರುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿರುತ್ತದೆ.  ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿರುವ ಲಂಚಬಾಕ ಪೌರಾಯುಕ್ತರು ಬ್ರೋಕರ್ ಹಾವಳಿ ಹೆಚ್ಚಾಗುವಂತೆ ಮಾಡಿರುತ್ತಾರೆ. ಪೌರಾಯುಕ್ತರ ಬಳಿ ಬಡವರು ಯಾವುದೇ ಕೆಲಸಕ್ಕೆ ಬಂದರೆ ಅವರಿಗೆ ಅವರಲ್ಲಿ ಮಾತನಾಡಲು ಅವಕಾಶವಿರುವುದಿಲ್ಲ. ಆದರೆ ಬ್ರೋಕರುಗಳು ಅಕ್ರಮ ಕಟ್ಟಡ ಕಟ್ಟಿದವರು ಬಂದರೆ ಅವರಿಗೆ ಬಾಗಿಲು ತೆರೆದೇ ಇರುತ್ತದೆ. ಆದರೆ ಹಿಂದಿನ ಪೌರಾಯುಕ್ತರು ಎಲ್ಲರಿಗೂ ಸಮಾನವಾಗಿ ಸ್ಪಂದಿಸುತ್ತಿದ್ದರು. ಈ ಪೌರಾಯುಕ್ತರು ಬಂದ ನಂತರ ನಗರಸಭೆ ಪುತ್ತೂರಿನಲ್ಲಿ ಇದೆಯೋ ಇಲ್ಲವೋ ಎನ್ನುವ ಸಂಶಯವು ಬರುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯಗಳು ತುಂಬಿ ಹೋಗಿದ್ದು ಗಬ್ಬು ವಾಸನೆ ಬರುತ್ತಿದೆ. ಇಂತಹ ಪೌರಾಯುಕ್ತರು ಪುತ್ತೂರಿನಲ್ಲಿ ಮುಂದುವರಿದರೆ ಜನರನ್ನು ಮಹಾಲಿಂಗೇಶ್ವರನೇ ಕಾಪಾಡಬೇಕು.

  • ನಾರಾಯಣ ಶೆಟ್ಟಿ, ಪುತ್ತೂರು