ಕಾರು ತಡೆದು ಹಣ ಲಪಟಾಯಿಸಿದ ಪ್ರಕರಣದ ಆರೋಪಿ ಪೊಲೀಸ್ ವಶ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾರು ತಡೆದು ನಿಲ್ಲಿಸಿ ಪ್ರಯಾಣಿಕಗೆ ಚಾಕು ತೋರಿಸಿ, ಬೆದರಿಕೆಯೊಡ್ಡಿ ಹಣವನ್ನು ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೆÇಲೀಸರು ಬಂಧಿಸಿದ್ದಾರೆ.ಉಳಿಯತ್ತಡ್ಕ ಬಿಲಾಲ್ ನಗರ ನಿವಾಸಿ ಅಬ್ದುಲ್ ಸಮದಾನಿ (24) ಬಂಧಿತ ಆರೋಪಿ.

ಈತನ ವಿರುದ್ಧ ಕಾಸರಗೋಡು, ವಿದ್ಯಾನಗರ ಠಾಣೆಗಳಲ್ಲೂ ಸಹ ಹಲವು ಪ್ರಕರಣ  ದಾಖಲಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಕರ್ನಾಟಕ ನಿವಾಸಿಯಾದ ಮೊಹಮ್ಮದ್ ಹಾರಿಸ್ ಎಂಬಾತಗೆ ಬೆದರಿಕೆಯೊಡ್ಡಿ ಹಣ ಲಪಟಾಯಿಸಿದ ಪರಕರಣಕ್ಕೆ ಸಂಬಂಧಿಸಿ ಇದೀಗ ಪೆÇಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.