ಆಧಾರ್: ಕಂಗೆಟ್ಟ ಜನತೆ

ಮಂಗಳೂರು : ಲಾಲಭಾಗಿನಲ್ಲಿರುವ ಮಹಾ ನಗರ ಪಾಲಿಕೆಯ ಕಟ್ಟಡದ ಕೆಳಭಾಗದಲ್ಲಿರುವ ಮಂಗಳೂರು ಒನ್ ಸೆಂಟರಿನಲ್ಲಿ ಮಂಗಳವಾರ ಸಾರ್ವಜನಿಕರು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂತು. ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಮಾಡಿಸಲು ಮಂಗಳವಾರ ಟೋಕನ್ ನೀಡಲಾಗುವುದು ಎಂದು ತಿಳಿಸಿದ ಹಿನ್ನೆಲೆಯಲ್ಲಿ ಭಾರೀ ಜನತೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಕಷ್ಟ ಅನುಭವಿಸಿದರು.