ಒಂಟಿ ಹಂತಕ ಗೌರಿಯನ್ನು ದಾರಿ ಮಧ್ಯದಿಂದ ಹಿಂಬಾಲಿಸಿರುವ ಶಂಕೆ

ಮನೆ ಪಕ್ಕ ಎರಡು ಬಾರಿ ಬಂದು ಹೋಗಿದ್ದ ಕೊಲೆಗಾರ

ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಇನ್ನಷ್ಟು ಬಿರುಸುಗೊಳಿಸಿರುವ ವಿಶೇಷ ತನಿಖಾ ತಂಡ, ಅಕೆಯ ಕೊಲೆ ನಡೆಸಿದ ವ್ಯಕ್ತಿ ಒಬ್ಬನೇ ಇರಬೇಕು ಹಾಗೂ ಆತ ಕೊಲೆ ನಡೆದ ದಿನ ಗೌರಿ ಅವರನ್ನು  ಅವರ ಗಾಂಧಿ ಬಜಾರದಲ್ಲಿರುವ ಪತ್ರಿಕಾ ಕಚೇರಿಯಿಂದಲೇ ಹಿಂಬಾಲಿಸದೆ ದಾರಿ ಮಧ್ಯದಿಂದ ಹಿಂಬಾಲಿಸಲು ಆರಂಭಿಸಿರಬಹುದು ಎಂದು ಬಲವಾಗಿ ಶಂಕಿಸಿದೆ.

ಗೌರಿ ಮನೆ ಸುತ್ತಮುತ್ತಲಿನ ಪರಿಸರದ ಬಗ್ಗೆ ಚೆನ್ನಾಗಿ ಅರಿತಿದ್ದ ಕೊಲೆಗಾರ, ಗೌರಿ ಅವರ ಮನೆಗೆ ಬಂದು ಅಲ್ಲಿ ಕೆಲವೊಮ್ಮೆ ಉಳಿಯುತ್ತಿದ್ದ ಅವರ ತಾಯಿ ಇಂದಿರಾ ಅಂದು ಮನೆಯಲ್ಲಿಲ್ಲ ಎಂಬುದನ್ನು  ಖಾತರಿಪಡಿಸಲು ಬಯಸಿದ್ದ

ಎಂದು ತಿಳಿದುಬಂದಿದೆ. ಹೆಲ್ಮೆಟ್ ಧರಿಸಿದ್ದ ಬೈಕ್ ಸವಾರನೊಬ್ಬ ಮೊದಲು ಗೌರಿ ಮನೆ ಪಕ್ಕ ಸೆಪ್ಟೆಂಬರ್ 5ರಂದು 3.30ರ ಸುಮಾರಿಗೆ ಬಂದು ಪ್ರವೇಶದ್ವಾರದತ್ತ ಒಮ್ಮೆ ಕಣ್ಣು ಹಾಯಿಸಿ ಅಲ್ಲಿಂದ ಹಿಂದಿರುಗಿದ್ದ ಎಂದು ಮೂಲಗಳು ತಿಳಿಸಿವೆ.

ಆ ಶಂಕಿತ ಬೈಕ್ ಸವಾರ ಮತ್ತೊಮ್ಮೆ ಮನೆ ಪಕ್ಕ ರಾತ್ರಿ 7.15ರ ಸುಮಾರಿಗೆ ಬಂದು ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಮತ್ತೊಮ್ಮ ಖಾತರಿಪಡಿಸಿಕೊಂಡಿದ್ದ.  “ಇದು ಸೀಸಿಟಿವಿ ದೃಶ್ಯಾವಳಿಗಳಿಂದ ಸ್ಪಷ್ಟ. ಮನೆ ಪಕ್ಕ ಎರಡನೇ ಬಾರಿ ಬಂದಾಗ ಮನೆಯೊಳಗೆ ದೀಪದ ಬೆಳಕು ಇಲ್ಲದೇ ಇರುವುದನ್ನು ಗಮನಿಸಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ್ದಿರಬೇಕು” ಎಂದು ಮೂಲಗಳು ತಿಳಿಸಿವೆಯಲ್ಲದೆ ಕೊಲೆಗಾರನ ವಯಸ್ಸು ಸುಮಾರು 32-35 ಆಗಿರಬೇಕೆಂದು ಅಂದಾಜಿಸಲಾಗಿದೆ. ಆತ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ನಿವಾಸದ ಪಕ್ಕ 7.15ರ ಹೊತ್ತಿಗೆ ಎರಡನೇ ಬಾರಿ ಬಂದಿರುವುದರಿಂದ ಆತನಿಗೆ ಮತ್ತೆ ಗೌರಿ ಕಾರನ್ನು ಆಕೆಯ ಗಾಂಧಿ ಬಜಾರ ಕಚೇರಿಯಿಂದಲೇ ಹಿಂಬಾಲಿಸಲು ಸಮಯ ಇರದೇ ಇದ್ದುದರಿಂದ ಆತ ದಾರಿ ಮಧ್ಯೆ ಆಕೆಗಾಗಿ ಎಲ್ಲೋ ಕಾದು ಕುಳಿತು ಆಕೆಯನ್ನು ಹಿಂಬಾಲಿಸಿ ಆಕೆ 8 ಗಂಟೆ ಸುಮಾರಿಗೆ ಮನೆ ತಲುಪಿದಾಗ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿರಬೇಕು,” ಎಂದು ಮೂಲಗಳು ತಿಳಿಸಿವೆ.

ಎಲ್ಲಾ ಆಯಾಮಗಳಿಂದಲೂ ತನಿಖೆ

ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ತಂಡಕ್ಕೆ ಕೆಲವೊಂದು ಪ್ರಮುಖ ಮಾಹಿತಿ ಲಭ್ಯವಾಗಿದ್ದು  ಆರ್ಥಿಕ ಹಾಗೂ  ವೈಯಕ್ತಿಕ ಕಾರಣಗಳೂ ಕೊಲೆಯ ಹಿಂದೆ ಕೆಲಸ ಮಾಡಿರಬಹುದೆಂಬ ಶಂಕೆಯಿದೆ. ಆದರೆ ಇವುಗಳನ್ನು ಇನ್ನಷ್ಟೇ ಪುಷ್ಠೀಕರಿಸಬೇಕು ಎಂದು ಮೂಲವೊಂದು ಬಹಿರಂಗ ಪಡಿಸಿದೆ. ಕಳೆದ ವಾರಾಂತ್ಯ ಗೌರಿ ತಾಯಿ ಇಂದಿರಾ ಅವರನ್ನು ಭೇಟಿಯಾಗಿದ್ದ ತನಿಖಾ ತಂಡ ಆಕೆಯಿಂದ ಆಸ್ತಿ ಸಂಬಂಧಿತ ದಾಖಲೆಗಳನ್ನು ಕೇಳಿದ್ದು  ಕುಟುಂಬದ ಆಸ್ತಿಯನ್ನು  ಆಕೆ ಹಾಗೂ ಆಕೆಯ ಮೂವರು