90 ಮಿಲಿಯನ್ ಡಾಲರ್ ಪಾವತಿಸಲು ಮಲ್ಯಗೆ ಆದೇಶ

ಲಂಡನ್ : ಸಿಂಗಾಪುರ ಮೂಲದ  ವಿಮಾನ ಲೀಸಿಂಗ್ ಸಂಸ್ಥೆ  ಬಿಒಸಿ ಏವ್ಯೇಷನ್ ಸಂಸ್ಥೆಗೆ  ಬಾಕಿಯಿರುವ  90 ಮಿಲಿಯನ್ ಅಮೆರಿಕನ್ ಡಾಲರ್  ಮೊತ್ತವನ್ನು ಪಾವತಿಸುವಂತೆ ಲಂಡನ್ ಹೈಕೋರ್ಟ್ ಸೋಮವಾರ ಮದ್ಯ ದೊರೆ ವಿಜಯ್ ಮಲ್ಯಗೆ ಆದೇಶಿಸಿದೆ. ಬಿಒಸಿ ಏವ್ಯೇಷನ್ ಸಂಸ್ಥೆಯಿಂದ ವಿಜಯ್ ಮಲ್ಯ ಒಡೆತನದಲ್ಲಿದ್ದ ಹಾಗೂ ಈಗ ಕಾರ್ಯನಿರ್ವಹಿಸದೇ ಇರುವ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆ ಲೀಸಿಗೆ ಪಡೆದುಕೊಂಡಿದ್ದ ಹಲವು ವಿಮಾನಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

LEAVE A REPLY