ಲಂಡನ್ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡದಲ್ಲಿ 12 ಸಾವು

ಲಂಡನ್ : ಇಲ್ಲಿನ 24 ಅಂತಸ್ತಿನ ಗ್ರೇನ್ಫೆಲ್ ಟವರಿನಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿ ಅವಗಢದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 20 ಮಂದಿಯ ಸ್ಥಿತಿ ಗಂಭೀರವಾಗಿದೆ. ಬೆಂಕಿ ತಗುಲಿದ ಕಟ್ಟಡದ 2ನೇ ಅಂತಸ್ತಿನಿಂದ ಅಗ್ನಿಶಾಮಕ ದಳ ಸಿಬ್ಬಂದಿಯು ಮಕ್ಕಳ ಸಹಿತ ಅನೇಕ ಜನರನ್ನು ಹೊರಗೆ ತರಲು ಪ್ರಯತ್ನಿಸಿದ್ದರೂ, ಪ್ರಾಣಾಪಾಯಕ್ಕೆ ಸಿಲುಕಿದವರ ಬೊಬ್ಬಿಡುವ ದೃಶ್ಯ ತೀರಾ ಮನಮಿಡಿಯುವಂತಿತ್ತು. ಭಗ್ನಾವಶೇಷಗೊಂಡಿರುವ ಈ ಕಟ್ಟಡ 1974ರಲ್ಲಿ ನಿರ್ಮಿಸಲಾಗಿತ್ತು.  ಅವಗಢದ ವೇಳೆ ಬೆಂಕಿಯಿಂದ ತತ್ತರಿಸಿ ಹೋಗಿದ್ದ ಮಹಿಳೆಯೊಬ್ಬಳು ಕಟ್ಟಡದ 9 ಅಥವಾ 10ನೇ ಅಂತಸ್ತಿನ ಕಿಟಕಿಯಿಂದ ತನ್ನ ಪುಟ್ಟ ಮಗುವೊಂದನ್ನು ಹೊರಗೆಸೆದಿದ್ದು, ಅದನ್ನು ಕೆಳಗಿದ್ದ ವ್ಯಕ್ತಿಯೊಬ್ಬರು ಸಮಯೋಚಿತವಾಗಿ ಹಿಡಿದು ಪ್ರಾಣಾಪಾಯದಿಂದ ಪವಾಡಸದೃಶ ಪಾರು ಮಾಡಿದರು.