ರಾಜ್ಯ ಲೋಕಾಯುಕ್ತಕ್ಕೆ ನಿಷ್ಕಳಂಕರನ್ನು ನೇಮಿಸಿ

ನ್ಯಾಯಮೂರ್ತಿ ಭಾಸ್ಕರರಾವ್ ರಾಜೀನಾಮೆ ನೀಡಿ ಸುಮಾರು ಒಂದು ವರ್ಷ ಕಳೆದ ಬಳಿಕ ಲೋಕಾಯುಕ್ತ ಹುದ್ದೆಗೆ ನ್ಯಾ ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿದೆ. ಭ್ರಷ್ಟಾಚಾರವನ್ನು ಅಳಿಸಿ ಹಾಕುವ ದೃಷ್ಟಿಯಿಂದಲೇ ಲೋಕಾಯುಕ್ತ ಸ್ಥಾಪಿಸಿರುವುದು. ಲೋಕಾಯುಕ್ತರಾಗಿ ನೇಮಕವಾಗುವವರು ನಿಷ್ಕಳಂಕರು ಮತ್ತು ಪಾರದರ್ಶಕ ವ್ಯಕ್ತಿತ್ವ ಉಳ್ಳವರಾಗಿರಬೇಕು. ವಿಶ್ವನಾಥ ಶೆಟ್ಟಿ ಅವರ ವಿರುದ್ಧ ಹಲವಾರು ಆರೋಪಗಳಿವೆ. ನ್ಯಾಯಾಂಗ ಸಿಬ್ಬಂದಿ ವಸತಿ ಸಹಕಾರ ಸಂಘದ ಮೂಲಕ ಕಾನೂನುಬಾಹಿರವಾಗಿ ನಿವೇಶನ ಪಡೆದಿದ್ದಾರೆ, ಮಗನ ಹೆಸರಿನಲ್ಲಿ ವಿಜಯ ಬ್ಯಾಂಕ್ ಉದ್ಯೋಗಿಗಳ ಸಹಕಾರಿ ಸಂಘದ ಮೂಲಕ ನಿವೇಶನ ಖರೀದಿಸಿದ್ದಲ್ಲದೆ ಮಗನ ಹೆಸರಿನಲ್ಲಿ ಏಳು ಎಕರೆ ಕೃಷಿ ಭೂಮಿಯನ್ನು ಕಡಿಮೆ ಬೆಲೆಗೆ ಕೊಂಡಿದ್ದಾರೆ, ಅಕ್ರಮ ಗಣಿಗಾರಿಕೆ ನಡೆಸಿದ್ದ ಜನಾರ್ದನ ರೆಡ್ಡಿ ಮುಂತಾದ ಭ್ರಷ್ಟರ ಪರ ವಕಾಲತ್ತು ವಹಿಸಿದ್ದರು ಮುಂತಾಗಿ ಅವರ ಮೇಲೆ ಆರೋಪಗಳಿವೆ. ಇಂತಹ ಹಿನ್ನೆಲೆ ಇರುವವರನ್ನು ಲೋಕಾಯುಕ್ತರ ಹುದ್ದೆಗೆ ಆಯ್ಕೆ ಮಾಡಿರುವುದು ನ್ಯಾಯಸಮ್ಮತವಲ್ಲ. ಅವರ ಹೆಸರು ಹೇಗೆ ಸರ್ವಸಮ್ಮತವಾಗಿ ಆಯ್ಕೆಯಾಯಿತು ಎನ್ನುವುದು ಹಲವಾರು ಸಂಶಯಗಳಿಗೆ ದಾರಿ ಮಾಡಿಕೊಡುತ್ತಿದೆ. ರಾಜ್ಯಪಾಲರು ವಿವೇಚನೆಯಿಂದ ತೀರ್ಮಾನ ಕೈಗೊಳ್ಳಬೇಕಾಗಿದೆ

  • ಎಸ್ ಎಮ್ ಪುತ್ತೂರು