ಮಳೆಯಿಂದ ಸೃಷ್ಟಿಯಾದ ರಸ್ತೆ ಹೊಂಡಗಳಿಗೆ ಸುದರ್ಶನ ತಂಡದಿಂದ ದುರಸ್ತಿ ಕಾರ್ಯ

ಕಾಸರಗೋಡು : ಗ್ರಾಮೀಣಾಭಿವೃದ್ಧಿಯ ಹೊಸ ಕನಸುಗಳೊಂದಿಗೆ ಅಸ್ತಿತ್ವಕ್ಕೆ ಬಂದು ನಿರಂತರ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿರುವ ಸಂಘಟನೆ ಮಾದರಿಯಾಗಿದೆ.

ಅತಿ ಹಿಂದುಳಿದು ಕುಗ್ರಾಮವೆನಿಸಿರುವ ಸ್ವರ್ಗ ಪ್ರದೇಶದ ಸ್ವರ್ಗ ಸೇತುವೆಯಿಂದ ಪಾಣಾಜೆ ಗಡಿವರೆಗೆ ಮಳೆಯಿಂದ ಸೃಷ್ಟಿಯಾಗಿದ್ದ ಭಾರೀ ರಸ್ತೆ ಹೊಂಡಗಳನ್ನು ವೆಟ್ ಮಿಕ್ಸ್ ಉಪಯೋಗಿಸಿ ಸುದರ್ಶನ ಗ್ರಾಮೀಣ ಅಭಿವೃದ್ಧಿ ಸಮಿತಿ ವತಿಯಿಂದ  ದುರಸ್ತಿಗೊಳಿಸಲಾಯಿತು. ಈ ರಸ್ತೆ ಹೊಂಡಗಳಿಂದಾಗಿ ಹಲವು ದ್ವಿಚಕ್ರವಾಹನಗಳು ಅಪಘಾತಕ್ಕೀಡಾಗಿತ್ತು. ಪೆರ್ಲದಿಂದ ಗೋಳಿಕಟ್ಟೆವರೆಗೆ 3.8 ಕಿ ಮೀ ರಸ್ತೆಯು ಈ ಹಿಂದೆ ಮೆಕ್ಕಾಡಾಂ ಡಾಮರೀಕರಣಗೊಂಡಿದ್ದು, ಬಾಕಿ ಉಳಿದ 1.8 ಕಿ ಮೀ ರಸ್ತೆಗೆ ಇದೀಗ 24 ಲಕ್ಷ ರೂ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯಬೇಕಾಗಿದ್ದು ಡಿಸೆಂಬರ್ ನಂತರ ರಿಟಾರಿಂಗ್ ನಡೆಯಲಿದೆ.

ಸುದರ್ಶನದ ಎಲ್ಲಾ ಗ್ರಾಮೀಣ ಚಟುವಟಿಕೆಗಳಿಗೆ ತಂಡದ ಸದಸ್ಯರು ತಮ್ಮ ಆದಾಯದಲ್ಲಿ ಒಂದಂಶವನ್ನು ಮೀಸಲಿಟ್ಟು ಯೋಜನೆ ಜಾರಿಗೊಳಿಸುತ್ತದೆ. ಜೊತೆಗೆ ಸ್ಥಳೀಯ ಹಲವು ದಾನಿಗಳೂ ಸುದರ್ಶನದೊಂದಿಗೆ ಅಗತ್ಯವಾದಾಗೆಲ್ಲ ನೆರವು ನೀಡುತ್ತಾರೆ.

ಸುದರ್ಶನವು ಈ ಮೊದಲು ಇದೇ ರಸ್ತೆಯ ಮೆಕ್ಕಾಡಾಂ ಡಾಮರೀಕರಣ ನಡೆಯುವಾಗ ಉಸ್ತುವಾರಿ ವಹಿಸಿತ್ತಲ್ಲದೆ ಕಾಮಗಾರಿ ನಡೆಯದೇ ಬಾಕಿ ಉಳಿದಿದ್ದ ರಸ್ತೆಯ ಮಣ್ಣು ತುಂಬಿ ನೀರು ಹರಿಯದೆ ಇದ್ದ ಮೂರು ಡ್ರೈನೇಜ್ ಪೈಪ್ ದುರಸ್ತಿ ಹಾಗೂ ತಡೆಗೋಡೆ ನಿರ್ಮಿಸಿದ್ದು, ಡ್ರೈನೇಜ್ ಕಣಿವೆ, ಪಾಶ್ರ್ವ ಭಾಗಗಳ ಸಮತಟ್ಟು, ಕಾಡು ಪೆÇದೆ ತೆರವು ಕಾರ್ಯ ವಾಣೀನಗರ ಹಾಗೂ ಕಾಟುಕುಕ್ಕೆ ಅಡ್ಕಸ್ಥಳ ರಸ್ತೆ ದುರಸ್ತಿ ನಡೆಸಿತ್ತು. ಎಂಡೋಪೀಡಿತ ಕುಟುಂಬಗಳ ಸಮೇತ ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಮರೀಚಿಕೆಯಾಗಿದ್ದ ಕನ್ಯಾರುಮೂಲೆ-ನೀರ್ಚಾಲು-ಪಿಲಿಂಗಲ್ಲು ಹಾಗೂ ಸ್ವರ್ಗ-ಮಲೆತ್ತಡ್ಕ ನೂತನ ರಸ್ತೆ ನಿರ್ಮಾಣಕ್ಕೆ ಈ ಮೂಲಕ ಕಾರಣೀಭೂತವಾಗಿತ್ತು.