`ಪ್ರಧಾನಿಯೇ ಕೇರಳ ಸರಕಾರವನ್ನು ಹೊಗಳಿದ ಮೇಲೆ ಸ್ಥಳೀಯ ಬಿಜೆಪಿ ನಾಯಕರ ಟೀಕೆಗೆ ಏನು ಬೆಲೆ ?’

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸ್ಚಚ್ಚ ಭಾರತ ಕಾರ್ಯಕ್ರಮವನ್ನು ಬಿಜೆಪಿ ಆಳುತ್ತಿರುವ ಯಾವುದೇ ರಾಜ್ಯಗಳು ಸರಿಯಾಗಿ ಜಾರಿಗೊಳಿಸದೇ ಇರುವಾಗ ಕೇರಳದಲ್ಲಿ ಅದನ್ನು ಯಶಶ್ವೀಯಾಗಿ ಜಾರಿಗೊಳಿಸಿದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಕ್ತ ಕಂಠದಿಂದ ಪ್ರಸಂಶಿದ ತರುವಾಯ ಜಿಲ್ಲೆಯ ಬಿಜೆಪಿ ನೇತಾರರಾದ ನ್ಯಾಯವಾದಿ ಶಶಿಕಾಂತ್ ಹಾಗೂ ಸುಧಾಮ ಗೋಸಾಡ ಟೀಕಿಸಿ ಪತ್ರಿಕಾ ಹೇಳಿಕೆ ನೀಡಿರುವುದು ಅಪ್ರಸ್ತುತ ಎಂದು ಮಂಜೇಶ್ವರ ಎಲ್ ಡಿ ಎಫ್ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಕಳೆದ ಡಿಸಂಬರ್ 8ರಂದು ಹಸಿರು ಕೇರಳ, ಸಂಪೂರ್ಣ ಗೃಹ ನಿರ್ಮಾಣ, ಸಮಗ್ರ ಆರೋಗ್ಯ, ಸಮಗ್ರ ವಿದ್ಯಾಭ್ಯಾಸ ನವೀಕರಣಕ್ಕೆ ಕಾರಣವಾಗುವ ನವ ಕೇರಳ ಮಿಶನಿನ ರಾಜ್ಯ ಮಟ್ಟದ ಉದ್ಘಾಟನೆ ನೆರವೇರಿಸಿದ ಕೆರಳದ ರಾಜ್ಯಪಾಲರು ಹೇಳಿದ ಮಾತನ್ನು ಜಿಲ್ಲಾ ಬಿಜೆಪಿ ನೇತಾರರು ಅರ್ಥೈಸಿಕೊಳ್ಳಬೇಕಾಗಿದೆ. ಆರೋಗ್ಯ ವಿದ್ಯಾಭ್ಯಾಸ, ಗೃಹ ನಿರ್ಮಾಣ ಯೋಜನೆಗಳ ಜಾರಿಯಲ್ಲಿ ಕೇರಳ ರಾಜ್ಯ ಅನುಕರಣೀಯ ಸಾಧನೆ ಮಾಡಿದೆ. ಆದರೆ ಈ ಬಗ್ಗೆ ಜಿಲ್ಲಾ ಬಿಜೆಪಿ ನೇತಾರರಿಗೆ ಇನ್ನೂ ಅರ್ಥವಾಗದೇ ಇರುವುದು ವಿಪರ್ಯಾಸಕರ” ಎಂಬುದಾಗಿ ಎಲ್ ಡಿ ಎಫ್ ಹೇಳಿದೆ.