ಜೆಪ್ಪು ಕಂಪೌಂಡಿಗೆ ಲೋಬೋ ಭೇಟಿ ; ಬಿಷಪ್ ಸೃಷ್ಟಿಸಿದ ಸಮಸ್ಯೆ ಪರಿಹಾರಕ್ಕೆ ಯತ್ನ ಭರವಸೆ

  ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜೆಪ್ಪು ಕಂಪೌಂಡ್ ನಿವಾಸಿಗಳನ್ನು ಮಂಗಳೂರು ಬಿಷಪ್ ಅಲೋಷಿಯಸ್ ಪೌಲ್ ಡಿ’ಸೋಜ ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆಂದು ಜೆಪ್ಪು ಪ್ಯಾರಿಷನರ್ಸ್ ಅಸೋಸಿಯೇಶನ್ ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು  ಇತ್ಯರ್ಥಪಡಿಸಲು ತಾವು ಪ್ರಾಮಾಣಿಕ ಯತ್ನ ನಡೆಸುವುದಾಗಿ ಮಂಗಳೂರು ದಕ್ಷಿಣ ಶಾಸಕ ಜೆ ಆರ್ ಲೋಬೋ ಸಂತ್ರಸ್ತರಿಗೆ ಆಶ್ವಾಸನೆ ನೀಡಿದ್ದಾರೆ. ಎರಡೂ ಕಡೆಗಳವರನ್ನು ಒಂದೇ ಕಡೆಯಲ್ಲಿ ಕೂರಿಸಿ  ಚರ್ಚೆ ನಡೆಸಲು ಅನುವು ಮಾಡಿಕೊಡುವುದಾಗಿಯೂ ಅವರು ಹೇಳಿದ್ದಾರೆ.

ಜೆಪ್ಪು ಕಂಪೌಂಡಿಗೆ ಭೇಟಿ ನೀಡಿದ ಶಾಸಕ ಅಲ್ಲಿನ ನಿವಾಸಿಗಳಿಂದ ಮನವಿ ಸ್ವೀಕರಿಸಿ ನಂತರ ಅವರ ಜತೆ ಮಾತನಾಡಿ, “ಈ ವಿಚಾರದಲ್ಲಿ ಸರಕಾರ ಶಾಮೀಲಾಗಿಲ್ಲದೇ ಇರುವುದರಿಂದ ಯಾವುದೇ ನಿರ್ದಿಷ್ಟ ಭರವಸೆ ನೀಡಲು ಸಾಧ್ಯವಾಗುವುದಿಲ್ಲ, ಆದರೂ ಸಮಸ್ಯೆ ಪರಿಹಾರಕ್ಕೆ ನನ್ನಿಂದಾದಷ್ಟು ಯತ್ನಿಸುತ್ತೇನೆ. ತಾಳ್ಮೆಯಿಂದಿರಿ” ಎಂಬ ಸಲಹೆ ನೀಡಿದ್ದಾರೆ.

ಸಂತ್ರಸ್ತರು ಮಾತುಕತೆಗೆ ಸಿದ್ಧ ಎಂದು ಪ್ರತಿಭಟನಾಕಾರರ ನೇತೃತ್ವ ವಹಿಸಿರುವ ಎರಿಕ್ ಒಝಾರಿಯೋ ಹೇಳಿದ್ದಾರೆ.

ಜೆಪ್ಪು ಕಂಪೌಂಡ್ ನಿವಾಸಿಗಳಿಗೆ ಸರಕಾರ 130 ವರ್ಷಗಳ

ಹಿಂದೆ  ಕೊಡಮಾಡಿದ್ದ ಸರ್ವೇ ಸಂಖ್ಯೆ  601, 611, 612, 613, 614 ಹಾಗೂ 719  ಇಲ್ಲಿನ ಜಾಗ ತಮಗೆ ಸೇರಿದ್ದು ಎಂದು ಬಿಷಪ್ ಹೇಳಿದ್ದಾರೆಂಬುದು ಇಲ್ಲಿನ  ನಿವಾಸಿಗಳು ಆರೋಪಿಸಿದ್ದು, ಆರ್ಟಿಐ ಕಾರ್ಯಕರ್ತರಾದ ವಿಕ್ಟರ್ ಪಾಯಸ್ ಹಾಗೂ  ವಲೇರಿಯನ್ ಟೆಕ್ಸೇರಾ ಅವರಿಗೆ ಜಾಗ ಖಾಲಿ ಮಾಡುವಂತೆ ನೀಡಿದ  ನೋಟಿಸ್ ವಾಪಸ್ ಪಡೆಯಬೇಕೆಂದೂ ಅವರು ಆಗ್ರಹಿಸಿದ್ದಾರೆ.

 

 

LEAVE A REPLY