ಅಕ್ರಮ ಮರಳುಗಾರಿಕೆ : ದೋಣಿ, ಡ್ರೆಜ್ಜಿಂಗ್ ಯಂತ್ರ ಮುಟ್ಟುಗೋಲು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನೇತ್ರಾವತಿ ನದಿ ಕಿನಾರೆಯ ಅರ್ಕುಳ ಗ್ರಾಮದ ವಳಚ್ಚಿಲ್ ಬಳಿ ಕಬ್ಬಿಣದ ದೋಣಿಯಲ್ಲಿ ಡ್ರೆಜ್ಜಿಂಗ್ ಯಂತ್ರವನ್ನು ಅಳವಡಿಸಿ ಅಕ್ರಮವಾಗಿ ಮರಳು ಸಂಗ್ರಹಿಸಿ ಮಾರಾಟ ಮಾಡಲು ಸಿದ್ಧವಾಗಿಟ್ಟಿರುವ ಬಗ್ಗೆ ಮಾಹಿತಿ ಪಡೆದ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸರು ದಾಳಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆದ ಆರೋಪಿ ಫರಂಗಿ ಪೇಟೆಯ ನಿವಾಸಿ ನಝೀರ್ ಎಂಬಾತ ಪರಾರಿಯಾಗಿದ್ದಾನೆ. ಸಿಆರ್ಝಡ್ ವಲಯದಲ್ಲಿ ಯಾಂತ್ರಿಕ ಮರಳುಗಾರಿಕೆ ನಿಷೇಧಿಸಲ್ಪಟ್ಟಿದ್ದು ಯಂತ್ರದ ಮೂಲಕ ಮರಳು ತೆಗೆಯಬಾರದೆಂದು ಕಾನೂನು ಇದ್ದರೂ ಅದನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿದ್ದ ಕಬ್ಬಿಣದ ದೋಣಿ, ಡ್ರೆಜ್ಜಿಂಗ್ ಯಂತ್ರವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.