`ಲಿವ್-ಇನ್ ಜೋಡಿ, ವಿಧವೆಯರಿಗೂ ಬಾಡಿಗೆ ತಾಯಂದಿರ ಸೇವೆ ಸಿಗಲಿ’

ನವದೆಹಲಿ : ಕಾನೂನುಬದ್ಧ ವಿವಾಹವಾಗಿರುವ ದಂಪತಿಗಳ ಹೊರತಾಗಿ ಲಿವ್-ಇನ್ ಜೋಡಿಗಳು ಮತ್ತು ವಿಧವೆಯರಿಗೂ  ಬಾಡಿಗೆ ತಾಯ್ತನದ ಸೇವೆ ಪಡೆಯಲು ಅನುಮತಿಸಬೇಕು ಎಂದು ಸಂಸದೀಯ ಸಮಿತಿ ಗುರುವಾರ ತಿಳಿಸಿದೆಯಲ್ಲದೆ ಬಾಡಿಗೆ ತಾಯಂದಿರಿಗೆ “ಸಾಕಷ್ಟು ಸೂಕ್ತ” ಆರ್ಥಿಕ ಸಹಾಯ ಒದಗಿಸಬೇಕೆಂದೂ ಆಗ್ರಹಿಸಿದೆ. ಬಾಡಿಗೆ ತಾಯಂದಿರು ಹಣ ಪಡೆಯದೆಯೇ ಇನ್ನೊಬ್ಬರಿಗಾಗಿ ಮಗು ಹೆರಲು ಒಪ್ಪುವುದನ್ನು ಸಮಿತಿ ವಿರೋಧಿಸಿದೆ.  ಅವಿವಾಹಿತ ಜೋಡಿಗಳು, ವಿಚ್ಛೇದಿತರು, ಲಿವ್-ಇನ್ ಸಂಗಾತಿಗಳು ಮತ್ತು ಸಲಿಂಗಿಗಳು ಬಾಡಿಗೆ ತಾಯಂದಿರ ಸೇವೆ ಪಡೆಯುವುದನ್ನು ನಿಷೇಧಿಸುವ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ 2016 ಇದನ್ನು ಸಂಸತ್ತಿನಲ್ಲಿ ಮಂಡಿಸಲು  ಸಚಿವ ಸಂಪುಟ ಒಪ್ಪಿಗೆ ನೀಡಿತ್ತು.