`ಮುಖಪುಟ’ ಸಾಹಿತ್ಯ- ಕಲಾ ಸಮಾವೇಶ

ಸಾಂದರ್ಭಿಕ ಚಿತ್ರ

ಉಡುಪಿ : ಮಣಿಪಾಲ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲಾ ವೇದಿಕೆ (ಮಿಲಾಪ್) ಮೊದಲ ಸಾಹಿತ್ಯ ಸಮಾವೇಶದ ಮೊದಲ ದಿನದ ಸಾಹಿತ್ಯ ಕಲಾ ಉತ್ಸವವನ್ನು ಕೆ ಕೆ ಹೆಬ್ಬಾರ್ ಆರ್ಟ್ ಗ್ಯಾಲರಿ ಮತ್ತು ಕಲಾ ಕೇಂದ್ರದಲ್ಲಿ ಹಿರಿಯ ಕನ್ನಡ ಬರಹಗಾರರಾದ ವೈದೇಹಿ ಉದ್ಘಾಟಿಸಿದರು.

ಮುಖಪುಟ ಪ್ರದರ್ಶನದಲ್ಲಿ ಸಾಹಿತ್ಯ ಕಲಾ ಸಲ್ಲಿಕೆಗಳು, ಕೆ ಕೆ ಹೆಬ್ಬಾರ್ ಕಲಾ ರಚನೆಗಳೊಂದಿಗೆ ಪ್ರದರ್ಶನಕ್ಕೆ ಇಡಲಾಗುತ್ತದೆ. ಪ್ರದರ್ಶನವು ಪ್ರಮುಖವಾಗಿ ಪುಸ್ತಕಗಳ ಮುಖಪುಟ ವಿವರಣೆ ಮತ್ತು ವ್ಯಾಪಕ ಪ್ರದರ್ಶನಗಳನ್ನು ಕೇಂದ್ರೀಕರಿಸುತ್ತದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಚಂದ್ರಶೇಖರ ಕಂಬಾರ ಪುಸ್ತಕ ಪ್ರದರ್ಶನ ಮತ್ತು ಪುಸ್ತಕ ದಾನ ಅಭಿಯಾನಕ್ಕೆ ಚಾಲನೆ ನೀಡಿದರು.

ಪುಸ್ತಕ ಪ್ರದರ್ಶನವು 16 ಸ್ಟಾಲುಗಳನ್ನು ಒಳಗೊಂಡಿದೆ. ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಕಮ್ಯುನಿಕೇಷನ್ನಿನ ವಿದ್ಯಾರ್ಥಿಗಳು ಪುಸ್ತಕ ದಾನ ಮತ್ತು ವಿನಿಮಯ ಅಭಿಯಾನವನ್ನು ಕೈಗೊಂಡಿದ್ದರು.

ಕಾರ್ಯಕ್ರಮದ ಮೊದಲ ದಿನವನ್ನು ಪುಸ್ತಕ ದಾನಕ್ಕೆ ಮೀಸಲಾಗಿಟ್ಟಿದ್ದರು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಹಳೆ ಪುಸ್ತಕಗಳನ್ನು ಬದಲಾಯಿಸಿ ಹೊಸ ಪುಸ್ತಕಗಳನ್ನು ಕೊಂಡುಕೊಂಡರು. ಮಣಿಪಾಲ ಯುನಿವರ್ಸಿಟಿ ಪ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ಐದು ಭಾಷಾಂತರ ಪುಸ್ತಕಗಳನ್ನು ಬಿಡುಗಡೆ ಮಾಡಿದೆ. ಚಂದ್ರಶೇಖರ ಕಂಬಾರ ಕನ್ನಡದಲ್ಲಿ ಬರೆದಿರುವ ಮಹಾಮಾಯಿ ಪುಸ್ತಕವನ್ನು ಕಾತ್ಯಾಯನಿ ಕುಂಜಿಬೆಟ್ಟು ತುಳು ಭಾಷೆಗೆ ಭಾಷಾಂತರಿಸಿದ್ದಾರೆ. ವೈದೇಹಿ ಮತ್ತು ರಾಜವಾಡೆ ಕನ್ನಡದಲ್ಲಿ ಬರೆದಿರುವ ಜಸ್ಟ್ ಎ ಫ್ಯೂ ಪೇಜಸ್ : ಸಮ್ ಮೆಮರೀಸ್ ಆಫ್ ಸರಸ್ವತಿ ರಾಜವಾಡೆ ಪುಸ್ತಕಗಳನ್ನು ಜಾನಕಿ ಶ್ರೀನಿವಾಸ ಮೂರ್ತಿ ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದಾರೆ. ಗೋಪಾಲಕೃಷ್ಣ ಪೈ ಕನ್ನಡದಲ್ಲಿ ಬರೆದಿರುವ ಸ್ವಪ್ನ ಸರಸ್ವತ ಪುಸ್ತಕವನ್ನು ಸುಮತಿ ಶೆಣೈ ಎಂ ಆರ್ ರಕ್ಷಿತ್ ಮತ್ತು ಸವಿತಾ ಶಾಸ್ತ್ರಿ ಇಂಗ್ಲಿಷ್‍ಗೆ ಭಾಷಾಂತರಿಸಿದ್ದಾರೆ. ನೋಬರ್ಟ್ ಡಿಸೋಜಾ ಬರೆದಿರುವ ಬೆಮಣ್ ಎಂಬ ಕನ್ನಡ ಪುಸ್ತಕವನ್ನು ಎಸ್ ಎಂ ಪೇಜತಾಯ ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಶಿವರಾಮ ಕಾರಂತ ಬರೆದ ಕೋಮಸ್ಯ ಧಕ್ಕ ಕನ್ನಡ ಪುಸ್ತಕವನ್ನು ಕೊಕ್ಕಡ ಅನಂತ ಪದ್ಮನಾಭ ಸಂಸ್ಕøತಕ್ಕೆ ಭಾಷಾಂತರಿಸಿದ್ದಾರೆ. ಈ ಪುಸ್ತಕಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.