ಪಂಜಾಬ್ ಹೆದ್ದಾರಿ ಹೋಟೆಲುಗಳಲ್ಲಿ ಮದ್ಯ ಮಾರಾಟಕ್ಕೆ ಹಸಿರು ನಿಶಾನೆ

ಸಾಂದರ್ಭಿಕ ಚಿತ್ರ

ಚಂಡೀಗಢ : ಪಂಜಾಬ್ ಅಬಕಾರಿ ಕಾಯ್ದೆಯ(1914) ಸೆಕ್ಷನ್ 26 ತಿದ್ದುಪಡಿ ಮಾಡಲು ಪಂಜಾಬ್ ಅಸೆಂಬ್ಲಿ ಒಪ್ಪಿಗೆ ಸೂಚಿಸಿದ್ದು ಇದರ ಪರಿಣಾಮವಾಗಿ ಇನ್ನು ರಾಜ್ಯದ ಹೆದ್ದಾರಿಗಳಿಂದ 500 ಮೀಟರ್ ಅಂತರದಲ್ಲಿರುವ ಹೋಟೆಲು, ರೆಸ್ಟೋರೆಂಟುಗಳು ಮತ್ತು ಕ್ಲಬ್ಬುಗಳಲ್ಲಿ ಮದ್ಯ ಮಾರಾಟ ಮಾಡಬಹುದಾಗಿದೆ. ಆದರೆ ಚಿಲ್ಲರೆ ಮಳಿಗೆಗಳಿಗೆ ಮದ್ಯ ಮಾರಾಟ ನಿರ್ಬಂಧ ಮುಂದುವರಿಯುತ್ತದೆ.

“ಸರ್ಕಾರದ ಈ ನಿರ್ಧಾರದಿಂದ ರೆಸ್ಟೋರೆಂಟ್ ಉದ್ಯಮ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದಲ್ಲಿ 2,500ಕ್ಕೂ ಹೆಚ್ಚು ರೆಸ್ಟೋರೆಂಟುಗಳಿದ್ದು, ಇದರಲ್ಲಿ 1500 ರೆಸ್ಟೋರೆಂಟುಗಳು ಹೆದ್ದಾರಿ ಪಕ್ಕದಲ್ಲಿವೆ. ಸುಪ್ರೀಂ ಕೋರ್ಟಿನ ಆದೇಶವೊಂದರ ಬಳಿಕ ಈ ಉದ್ಯಮವು ದಿನವೊಂದಕ್ಕೆ 100 ಕೋಟಿ ರೂ ನಷ್ಟ ಹೊಂದುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ 50 ಕೋಟಿ ರೂ ನಷ್ಟವಾಗುತ್ತಿದೆ” ಎಂದು ಪಂಜಾಬ್ ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಅರೋರ ತಿಳಿಸಿದರು.