ಕಸದ ರಾಶಿಯಲ್ಲಿ ಬಚ್ಚಿಟ್ಟಿದ್ದ ಮದ್ಯ

ಮಂಜೇಶ್ವರ : ಮದ್ಯದಂಗಡಿಗೆ ಬೀಗ ಬೀಳುತ್ತಿರುವ ಮಧ್ಯೆ ಇನ್ನೊಂದೆಡೆ ಅನಧಿಕೃತ ಮದ್ಯ ಮಾರಾಟ ಹಾಗೂ ಸಾಗಾಟ ತೀವ್ರ ಸ್ವರೂಪವನ್ನು ಪಡೆಯುತ್ತಿದೆ.

ಇದು ಈಗ ಅಬಕಾರಿ ಪೆÇಲೀಸರಿಗೊಂದು ತಲೆ ನೋವಾಗಿ ಪರಿಣಮಿಸಿದೆ. ಇಂತಹ ಅನಧಿಕೃತ ಮದ್ಯ ಸಾಗಾಟ ಹಾಗು ಮಾರಾಟವನ್ನು ತಡೆಗಟ್ಟಲು ಅಬಕಾರಿ ಇಲಾಖೆ ಮತ್ತೆ ಸಿದ್ಧವಾಗಿದೆ.  ಇದರಂತೆ ಚೆರ್ಕಳದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ 180 ಎಂ ಎಲ್  240 ಬಾಟಲಿ ಮದ್ಯವನ್ನು ಪತ್ತೆ ಹಚ್ಚಲಾಗಿದೆ. ಚೆರ್ಕಳ ರಾಷ್ಟ್ರೀಯ ಹೆದ್ದಾರಿಯ ಕಸದ ರಾಶಿಯಲ್ಲಿ ಮದ್ಯವನ್ನು ಬಚ್ಚಿಡಲಾಗಿತ್ತು. ಮಾರಾಟಕ್ಕಾಗಿ ತಂದಿರಿಸಬಹುದಾಗಿ ಶಂಕಿಸಲಾಗಿದೆ.

ರಾಜ್ಯ, ರಾಷ್ಟ್ರೀಯ ಹೆದ್ದಾರಿಯ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ತೆರವುಗೊಳಿಸಲು ಸುಪ್ರಿಂ ಕೋರ್ಟು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಹಲವು ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಇದೀಗ ಕಾಸರಗೋಡಿನ ಎ ಐ ಸಿ ಭಂಡಾರಿ ರಸ್ತೆ ಸಮೀಪದ ಸರಕಾರಿ ವೇರಹೌಸ್ ಕಟ್ಟಡದಲ್ಲಿ ಮಾತ್ರವೇ ಬಿವರೇಜ್ ಕಾರ್ಪರೇಶನ್ನಿನ ಏಕೈಕ ಮದ್ಯದಂಗಡಿ ಕಾರ್ಯಾಚರಿಸುತ್ತಿದೆ. ಇಲ್ಲಿ ಬೆಳಗ್ಗಿನಿಂದ ರಾತ್ರಿತನಕ ಮದ್ಯಕಾಗಿ ಜನರು ಮುಗಿ ಬೀಳುವ ದೃಶ್ಯ ಕಂಡು ಬರುತ್ತಿದೆ.