ಮದ್ಯ ಸೇವನೆ ಮೂಲಭೂತ ಹಕ್ಕಲ್ಲ

ಸಾಂದರ್ಭಿಕ ಚಿತ್ರ

ಕೇರಳ ಹೈಕೋರ್ಟ್

ಕೊಚ್ಚಿ : ಕೇರಳದ ಹಿಂದಿನ ಯುಡಿಎಫ್ ಸರಕಾರದ ಮದ್ಯ ನೀತಿಯನ್ನು ಎತ್ತಿ ಹಿಡಿದಿರುವ ಕೇರಳ ಹೈಕೋರ್ಟಿನ ವಿಭಾಗೀಯ ಪೀಠ, ಮದ್ಯ ಸೇವನೆ ಮೂಲಭೂತ ಹಕ್ಕು ಅಲ್ಲ ಎಂದು  ತನ್ನ ತೀರ್ಪು ಪ್ರಕಟಿಸಿದೆ.

ರಬ್ಬರ್ ಟ್ಯಾಪಿಂಗ್ ವೃತ್ತಿಯನ್ನು ನಿರ್ವಹಿಸುವ ಅನೂಪ್ ಎಂ ಎಸ್ ಎಂಬವರು ಸರಕಾರ ಮದ್ಯ ನೀತಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯಲ್ಲಿ ಮದ್ಯ ನಿಷೇಧವನ್ನು ಹಂತಹಂತವಾಗಿ  ಜಾರಿಗೊಳಿಸುವ ಅಧಿಕಾರವೂ ಅಬಕಾರಿ ಕಾಯ್ದೆಯನ್ವಯ ಸರಕಾರಕ್ಕಿಲ್ಲ ಎಂದು ವಾದಿಸಿದ್ದರು.

“ಮದ್ಯ ನನ್ನ ದೈನಂದಿನ ಆಹಾರ ಪದ್ಧತಿಯ ಭಾಗವಾಗಿದೆ, ಅದು ತನಗೆ ಜೀವನದ ಎಲಿಕ್ಸಿರ್ ಇದ್ದಂತೆ, ತನ್ನನ್ನು ದೈಹಿಕವಾಗಿ ಫಿಟ್ ಇರಿಸುತ್ತದೆ ಹಾಗೂ ದಿನದ ಕೆಲಸದ ನಂತರ ದೇಹವನ್ನು ಪುನರುಜ್ಜೀವಗೊಳಿಸುತ್ತದೆ” ಎಂದು ಅನೂಪ್ ಹೇಳಿದ್ದರಲ್ಲದೆ ಮದ್ಯ ನೀತಿಯನ್ನು ಜಾರಿಗೊಳಿಸಿ ಕೇರಳ ಸರಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿದೆ ಎಂದೂ ಅವರು ದೂರಿದ್ದರು.