ವಿದ್ಯುತ್ ಶಾಕ್ ತಗುಲಿ ಲೈನ್ಮನ್ ಸ್ಥಳದಲ್ಲೇ ಸಾವು

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿನ ಚಿತ್ತಾಕುಲದ ಸಿಬರ್ಡ್ ಕಾಲೊನಿಯಲ್ಲಿ ವಿದ್ಯುತ್ ದುರಸ್ತಿ ಮಾಡುತ್ತಿದ್ದ ಲೈನ್ಮನ್ನಿಗೆ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂಲತಃ ಶೃಂಗೇರಿಯ ಸದ್ಯ ಸದಾಶಿವಗಡ ನಿವಾಸಿ ಶಿವಾನಂದ ನಿಜಣ್ಣವರ್ ಮೃತಪಟ್ಟವರು. ಇವರು ಅಲ್ಲಿನ ಟ್ರಾನ್ಸಫಾರ್ಮರ್ ದುರಸ್ತಿ ಮಾಡುತ್ತಿರುವಾಗ ಈ ಅವಘಡ ಸಂಭವಿಸಿದೆ. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY