ಮೂಲೆ ಸೇರಿದ ಏತನೀರಾವರಿ

ಕೃಷಿ ಭೂಮಿಗೆ ನೀರು ಒದಗಿಸುವ ಸಲುವಾಗಿ ಜ 6ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಹಂತದ ಏತನೀರಾವರಿ ಯೋಜನೆಯನ್ನು ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಮಡಿವಾಳಪಡ್ಪು ಸ್ಥಳದಲ್ಲಿ ನೇತ್ರಾವತಿ ನದಿಗೆ 100 ಅಶ್ವ ಶಕ್ತಿಯ ಪಂಪ್ ಅಳವಡಿಸಿ ನೀರೆತ್ತುವ ಯೋಜನೆಯನ್ನು ನಿರ್ಮಿಸಿದರು. ಈ ಯೋಜನೆಗೆ ಸಚಿವರು ರಮಾನಾಥ ರೈ ಚಾಲನೆ  ಕೊಟ್ಟಿದ್ದರು. 800 ಎಕರೆ ಕೃಷಿಭೂಮಿಗೆ ನೇತ್ರಾವತಿಯಿಂದ ನೀರು ಪೂರೈಕೆ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಅದರಂತೆ ಎರಡು ಗ್ರಾಮಗಳ 180 ಎಕರೆ ಜಮೀನಿನಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಈ ಯೋಜನೆಗೆ ಬಳಸಿದ ಜಮೀನು ಸರ್ಕಾರದಲ್ಲ ; ಬದಲಾಗಿ ಸ್ಥಳಿಯರದ್ದೇ ಆಗಿತ್ತು. “ನಿಮ್ಮ ಉಪಯೋಗಕ್ಕಾಗಿ ಈ ಯೋಜನೆ” ಎಂದು ನಂಬಿಸಿ ಅವರ ಜಮೀನಿನಲ್ಲಿ ಯೋಜನೆಯ ಪೈಪನ್ನು ಅಳವಡಿಸಿದ್ದಾರೆ ಆದರೆ ಯಾವುದೆ ರೀತಿಯ ಪರಿಹಾರವನ್ನು ಜನರಿಗೆ ನೀಡಿಲ್ಲ. ರೈತರು ತಮಗೆ ನೀರು ಬರುತ್ತೆ ಎಂಬ ಆಸೆಯಿಂದ ಇದಕ್ಕೆ ಒಪ್ಪಿಕೊಂಡು ಜಮೀನನ್ನು ನೀಡಿದ್ದರು. ಈ ಯೋಜನೆಯಾದ ಎರಡು ದಿನ ಕೃಷಿಗೆ ನೀರನ್ನು ಬಳಸಿದ್ದಾರೆ ಹೊರತು ನಂತರ ಏತನೀರಾವರಿಯಿಂದ ಯಾವ ಪ್ರಯೋಜನವೂ ರೈತರಿಗೆ ಹಾಗಿಲ್ಲ. ಅಷ್ಟೆ ಅಲ್ಲದೆ ಈ ಯೋಜನೆಯನ್ನು ಮುಂಧಿನ ತಿಂಗಳಿನಲ್ಲಿ ನಿಲ್ಲಿಸಬೇಕೆಂದು ಅಧೀಕಾರಿಗಳು ಸೂಚಿಸಿದ್ದಾರಂತೆ.  ಅಷ್ಟು ಭೂಮಿಯನ್ನು ನಾಶ ಮಾಡಿದ ಯೋಜನೆ ಮೂಲೆ ಸೇರಿದೆ. ಭೂಮಿ ಕೊಟ್ಟ ರೈತರ ಪಾಲಿಗೆ ಭೂಮಿಯೂ ಇಲ್ಲ, ಕೃಷಿಗೂ ನೀರು ಇಲ್ಲದಂತಾಗಿದೆ. ನೀರು ಸಿಕ್ಕಿಲ್ಲಂತಾzರೂ ಅವರು ಕಳೆದುಕೊಂಡ ಭೂಮಿಗೆ ಸರಿಯಾದ ಪರಿಹಾರವನ್ನಾದರೂ ಒದಗಿಸಬೇಕು ; ಇಲ್ಲಾ ಕೃಷಿಗೆ ನೀರನ್ನಾದರು ಬಿಡಬೇಕು. ಯೋಜನೆಗೆ ಚಾಲನೆ ಕೊಟ್ಟು ಹೋದ ಶಾಸಕರು ಈ ಬಗ್ಗೆ ಗಮನಹರಿಸಿ ಸಜೀಪಮುನ್ನೂರು ಮತ್ತು ಮೂಡದ ಜನತೆಗೆ ನ್ಯಾಯ ಒದಗಿಸಬೇಕು.

  • ಸಾಕಿ,್ಷ ಸಜೀಪ