ರಿಕ್ಷಾ ತಪ್ಪಿಸಲು ಹೋಗಿ ಮೀನಿನ ಲಾರಿ ಪಲ್ಟಿ

ರಾ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಮೀನಿನ ಲಾರಿ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಮಲ್ಪೆಯಿಂದ 609 ಲಾರಿ ಮೀನು ತುಂಬಿಸಿಕೊಂಡು ಕೊರವಡಿ ಫಿಶ್ ಮಿಲ್ಲಿಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆಕ್ಕಟ್ಟೆಯಲ್ಲಿ ಬಸ್ ನಿಲ್ದಾಣದಲ್ಲಿ ರಿಕ್ಷಾವೊಂದು ಅಡ್ಡ ಬಂದ ಪರಿಣಾಮ ತಪ್ಪಿಸಲು ಹೋದಾಗ ನಿಯಂತ್ರಣ ಕಳÉದುಕೊಂಡು ತೀರಾ ಬಲಬದಿಗೆ ಬಂದು ಪಲ್ಟಿಯಾಗಿದೆ.

ಕಾರ್ಖಾನೆ ಸಮೀಪವಾಗಿದ್ದರಿಂದ ಬೇರೊಂದು ವಾಹನವನ್ನು ಕರೆಯಿಸಿ ಮೀನನ್ನು ಸಾಗಿಸಲಾಯಿತು. ಅಪಘಾತ ನಡೆದ ಸ್ಥಿತಿಯಲ್ಲಿ ಗಂಭೀರ ಗಾಯಗಳಾಗುವ ಸಂದರ್ಭವಿದ್ದರೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಕೋಟ ಪೊಲೀಸ್ ಠಾಣೆಯ ಎಎಸೈ ಸುಧಾ ಪ್ರಭು ಹಾಗು ಸಿಬ್ಬಂದಿ ಸ್ಥಳಕ್ಕಾಗಮಿಸಿ ಸಂಚಾರ ಸುಗಮಗೊಳಿಸಿದರು. ಲಾರಿ ಮುಂಭಾಗದ ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.