ಪ್ರತಿಭಟಿಸಿದವರ ವಿರುದ್ಧ ಎಫ್ ಐ ಆರ್ ದಾಖಲಿಸಲು ಪೆÇಲೀಸ್ ಆಯುಕ್ತಗೆ ಪತ್ರ

ಆಯುಕ್ತ ಚಂದ್ರಶೇಖರ್

`ಸರ್ವಧರ್ಮ ಸದ್ಬಾವನೆ’ ನಮ್ಮದಲ್ಲ ಎಂದ ಆರೆಸ್ಸೆಸ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇತ್ತೀಚೆಗೆ ನಗರದ ಹೋಟೆಲೊಂದರಲ್ಲಿ ನಡೆದ `ಸರ್ವಧರ್ಮ ಸದ್ಬಾವನೆ’ ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸಿನ ಯಾವುದೇ ಪಾತ್ರ ಇಲ್ಲ ಎಂದು ಸಾಂಸ್ಕೃತಿಕ ಸಂಘಟನೆ ಸ್ಪಷ್ಟಪಡಿಸಿದೆ.

ನಿವೃತ್ತ ಹಿರಿಯ ಪೆÇಲೀಸ್ ಅಧಿಕಾರಿ ನೇತೃತ್ವದ ಒಂದು ಸ್ವತಂತ್ರ ಎನ್ ಜಿ ಒ ಆಯೋಜಿಸಿದ ಕಾರ್ಯಕ್ರಮವಾಗಿದ್ದು, ದೇಶದಲ್ಲಿ ಹಿಂದೂ-ಮುಸ್ಲಿಂ ಏಕತೆಗಾಗಿ ಶ್ರಮಿಸುತ್ತಿರುವ ಇಂದ್ರೇಶಜೀಕುಮಾರ್ ಅವರು ಮುಸ್ಲಿಂ ರಾಷ್ಟ್ರೀಯ ಮಂಚ್ ವತಿಯಿಂದ ಪಾಲ್ಗೊಂಡಿದ್ದರು ಎಂದು ಸಂಘ ಹೇಳಿದೆ.

ಅನಗತ್ಯವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಎಳೆದು ತಂದಿರುವುದು ಮಂಗಳೂರಿನಲ್ಲಿ ಅಶಾಂತಿ, ಗಲಭೆ ಸೃಷ್ಟಿಸುವ ಸಂಚಿನ ಭಾಗವಾಗಿದೆ. ಆದ್ದರಿಂದ ಪ್ರತಿಭಟನೆ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ಎಫ್ ಐ ಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರಿನ ಸಂಘಚಾಲಕ ಡಾ ಸತೀಶ್ ರಾವ್ ಮತ್ತು ಸಹಸಂಘಚಾಲಕ್ ಸುನೀಲ್ ಆಚಾರ್ ಅವರು ಜಿಲ್ಲಾಧಿಕಾರಿ ಮತ್ತು ಪೆÇಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ದೇಶದಲ್ಲಿನ ಪ್ರಚಲಿತ ವಿದ್ಯಮಾನ ಹಾಗೂ ಸಮಸ್ಯೆಗಳ ಮೂಲದ ಬಗ್ಗೆ ಆಳ ಅಧ್ಯಯನ ಹೊಂದಿರುವ ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಎಂ ಎನ್ ಕೃಷ್ಣಮೂರ್ತಿಯಂತಹ ಗಣ್ಯರು ಸಾಮಾಜಿಕ ಕಾಳಜಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ಇದಾಗಿದ್ದು, ಇದೀಗ ಕೆಲವು ಮತಾಂಧ ಮತ್ತು ತೀವ್ರವಾದಿ ಗುಂಪುಗಳು ಇದರ ವಿರುದ್ಧ ಪ್ರತಿಭಟನೆ ನಡೆಸಿ ದ್ವೇಷ ಹರಡುವಂತಹ ಕೃತ್ಯಗಳಲ್ಲಿ ತೊಡಗಿರುವುದು ಕಂಡುಬಂದಿದೆ. ಪ್ರಜಾತಂತ್ರದಲ್ಲಿ ಇಂತಹ ಸಾಮರಸ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶಗಳಿರುವಾಗ ಇದರ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಿರುವ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ವಿನಂತಿಸುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಮುಸ್ಲಿಂ ರಾಷ್ಟ್ರೀಯ ಮಂಚ್ ಮುಸ್ಲಿಂ ಪ್ರಜ್ಞಾವಂತರ ಸಂಘಟನೆಯಾಗಿದ್ದು, ಇದು ಮತಾಂಧತೆ ವಿರುದ್ಧ ಹೋರಾಡುತ್ತಿರುವ ಹಾಗೂ ರಾಷ್ಟ್ರೀಯ ಹಿತವನ್ನು ಎತ್ತಿಹಿಡಿಯಲು ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದೆ.  ಪ್ರಜಾತಂತ್ರದ ಅಡಿಯಲ್ಲೇ ವಿವೇಕಿ ಮುಸ್ಲಿಂ ಪ್ರಮುಖರು ಈ ಸಂಘಟನೆಯನ್ನು ಕಟ್ಟಿಕೊಂಡು ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಒಂದಾಗಿಸುವಲ್ಲಿ ಪರಿಶ್ರಮಿಸುತ್ತಿದೆ. ಆದರೆ ದ್ವೇಷ ಹಾಗೂ ಉಗ್ರವಾದದ ನಂಟಿನ ಗಂಭೀರ ಆರೋಪ ಹೊತ್ತಿರುವ ಪಾಪ್ಯುಲರ್ ಫ್ರಂಟ್, ಎಸ್ ಡಿ ಪಿ ಐ.ಯಂತಹ ಮತಾಂಧ ಗುಂಪುಗಳು ಇದರ ವಿರುದ್ಧ ಪ್ರತಿಭಟನೆ ನಡೆಸುವುದು ಪ್ರಜಾತಂತ್ರಕ್ಕೇ ಒಡ್ಡಿದ ಬೆದರಿಕೆಯಾಗಿದೆ ಎಂದು ಪತ್ರದಲ್ಲಿ ಖಂಡಿಸಲಾಗಿದೆ.

ಇದು ಪೆÇಲೀಸ್ ಇಲಾಖೆ ಮತ್ತು ಸಂಘಪರಿವಾರ ನಡುವಿನ ಅಪವಿತ್ರ ಮೈತ್ರಿ ಎಂದೆಲ್ಲ ತಿರುಚಿ ವಿವಾದ ಎಬ್ಬಿಸಿ, ಸಮಾಜದಲ್ಲಿ ತಪ್ಪು ತಿಳುವಳಿಕೆ ಮತ್ತು ದ್ವೇಷ ಹರಡುವ ಕೃತ್ಯದಲ್ಲಿ ತೊಡಗಿರುವುದು ಖಂಡನೀಯ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಗಣ್ಯರು, ಮೌಲ್ವಿಗಳೆಲ್ಲ ಸ್ವಂತ ವಿವೇಚನೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇದನ್ನು ಸಹಿಸಲಾಗದೆ ಅಸಹನೆ ವ್ಯಕ್ತಪಡಿಸುತ್ತಿರುವ ಗುಂಪುಗಳ ಕೃತ್ಯ ಕರಾವಳಿಯಲ್ಲಿ ಗಲಭೆ ಸೃಷ್ಟಿಸುವ ಹುನ್ನಾರವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಸ್ಲಿಂ ಗಣ್ಯರ ವಿರುದ್ಧ ವಾಟ್ಸಪ್ ಸಂದೇಶ ಮೂಲಕ ಅಸಹನೆ ಹರಡಲಾಗುತ್ತಿದೆ ಎಂದು ಬರೆಯಲಾಗಿದೆ.