ಬ್ಯಾಂಕುಗಳ ಎದುರು ನಿಲ್ಲುವ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ಅಗತ್ಯ

ಕಪ್ಪು ಹಣದ ವಿರುದ್ಧ ಸಮರ ಸಾರುತ್ತಾ ಕೇಂದ್ರ ಸರಕಾರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಕ್ರಮವೇನೋ ಶ್ಲಾಘನೀಯ. ಆದರೆ, ಜನಸಾಮಾನ್ಯರಿಗೆ ಇದರಿಂದ ಬಹಳ ತೊಂದರೆಯಾಗಿದ್ದು ಪ್ರತಿನಿತ್ಯ ಬ್ಯಾಂಕುಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಇದರಿಂದ ಹಿರಿಯ ನಾಗರಿಕರಿಗೆ ಮತ್ತಷ್ಟು ತ್ರಾಸವಾಗುತ್ತಿದೆ. ಗಂಟೆಗಟ್ಟಲೆ ನಿಲ್ಲುವುದರಿಂದ ಆಯಾಸಗೊಂಡ ಅದೆಷ್ಟೋ ಹಿರಿಯ ನಾಗರಿಕರು ಅಲ್ಲಿಯೇ ಕುಸಿದು ಬಿದ್ದು ಗಾಯಗೊಂಡ ಮತ್ತು ಸತ್ತ ಅನೇಕ ನಿದರ್ಶನಗಳಿವೆ.

ದೇಶದ ಪ್ರತಿಯೊಂದು ಬ್ಯಾಂಕಿನಲ್ಲಿಯೂ ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಿದರೆ ಅವರು ಬಹಳಷ್ಟು ಸಮಯ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸದಂತಾಗುತ್ತದೆ. ಅವರ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ. ಈ ಬಗ್ಗೆ ಕೇಂದ್ರ ಸರಕಾರ ಹಾಗೂ ನಮ್ಮ ಬ್ಯಾಂಕುಗಳು ಗಮನ ಹರಿಸಬೇಕಿದೆ.

  • ಎಂ ಚೇತನ್ ಸಫಲಿಗ, ಉಳ್ಳಾಲ ಮೂಡುಮಾಡ