ಕೊಂಕಣಿ ಯಕ್ಷಗಾನ ತಾಳಮದ್ದಲೆ ನಡೆಯಲಿ

ಕನ್ನಡ ಮತ್ತು ತುಳು ಭಾಷೆಯಲ್ಲಿ ಯಕ್ಷಗಾನ ಮತ್ತು ತಾಳಮದ್ದಲೆ ಬೆಳೆದಂತೆ ಬ್ಯಾರಿ ಭಾಷೆಯಲ್ಲಿ ಯಾಕೆ ಬೆಳೆಯಲಿಲ್ಲ ಎಂಬ ಬಗ್ಗೆ ತುಳು, ಕನ್ನಡ ಮತ್ತು ಬ್ಯಾರಿ ಭಾಷಾ ಸಾಹಿತಿಗಳು ಜನವರಿ 21ರಂದು ಮಂಗಳೂರಿನಲ್ಲಿ ಮುಕ್ತಾ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಕರಾವಳಿಯಲ್ಲಿ ಬ್ಯಾರಿ ಭಾಷೆ ಮಾತ್ರವಲ್ಲದೆ ಕೊಂಕಣಿ ಭಾಷೆಯಲ್ಲಿಯೂ ಯಕ್ಷಗಾನ ಮತ್ತು ತಾಳಮದ್ದಳೆ ಯಾಕೆ ಬೆಳೆಯಲಿಲ್ಲ ಎಂಬ ಬಗ್ಗೆ ಪರಾಮರ್ಶೆ ಅಗತ್ಯವಿದೆ. ಕೊಂಕಣಿ ಭಾಷಿಕ ಕ್ರೈಸ್ತರು ಯೇಸು ಕ್ರಿಸ್ತರ ಜೀವನಾಧರಿತ ಅಥವಾ ಬೈಬಲಿನಲ್ಲಿ ಬರುವ ಕಥೆಗಳ ಆಧಾರದಲ್ಲಿ ಹಾಗೂ ಕೊಂಕಣಿಗರು ಹಿಂದೂ ಪುರಾಣ ಕಥೆಗಳ ಆಧಾರದಲ್ಲಿ ಕೊಂಕಣಿ ಭಾಷೆಯಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಯಾಕೆ ಬೆಳೆಸುತ್ತಿಲ್ಲ ಎಂಬ ಬಗ್ಗೆಯೂ ಚರ್ಚೆ ನಡೆಸಬೇಕಾದ ಅಗತ್ಯವಿದೆ. ಹಾಗಾಗಿ ಬ್ಯಾರಿ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಲೆ ಬೆಳೆಸುವ ಬಗೆಗಿನ ಸಂವಾದದ ಜೊತೆಗೇ ಕೊಂಕಣಿ ಭಾಷೆಯ ಯಕ್ಷಗಾನ ಮತ್ತು ತಾಳಮದ್ದಳೆ ಬೆಳೆಸುವ ಬಗೆಗೆ ಸಂವಾದ ಆಗಲಿ ಎಂದು ಕೊಂಕಣಿ ಕಲಾಸಕ್ತರ ಕೋರಿಕೆ

  • ಕೆ ಕೆ ಹೆಗಡೆ  ಮಂಗಳೂರು