ರಸ್ತೆ ಡಿವೈಡರ್ ಮಧ್ಯೆ ಹೂಗಿಡ ಬೆಳಗಲಿ

ನಗರಪಾಲಿಕೆ ವ್ಯಾಪ್ತಿಯ ಕೆಲವು ರಸ್ತೆಗಳು  ಒಳರಸ್ತೆ ಹಾಗೂ ರಾಜ್ಯ ರಸ್ತೆಗಳು ದುರಸ್ತಿಗೊಂಡು ಕಾಂಕ್ರಿಟಿಕರಣದಿಂದ ಶೋಭಿಸುತ್ತಿದ್ದು ವಾಹನ ಚಾಲಕರಿಗೆ ಅತೀ ವೇಗದಿಂದ ವಾಹನ ಚಲಾಯಿಸಲು ಅನುಕೂಲಕರವಾಗುತ್ತಿದೆ  ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಮಂಗಳೂರು ನಗರವು ಸೇರ್ಪಡೆಗೊಂಡಿರುತ್ತದೆ  ರಸ್ತೆ ಡಿವೈಡರುಗಳ ಮಧ್ಯೆ ಸ್ಥಳವು ಖಾಲಿ ಬಿಟ್ಟಿದ್ದು ಗಿಡಗಂಟಿಗಳ ಬೆಳೆದು ಪೊದೆಯಂತೆ ಕಾಣುತ್ತಿದೆ  ಈ ಡಿವೈಡರುಗಳ ಮಧ್ಯೆ ಸ್ಥಳವನ್ನು ಶುಚಿಗೊಳಿಸಿ ಆ ಸ್ಥಳದಲ್ಲಿ ಗುಲಾಬಿಯೋ  ಮಲ್ಲಿಗೆಯೋ  ದಾಸವಾಳದ ಗಿಡಗಳನ್ನು ನೆಟ್ಟು ಆ ಗಿಡಗಳ ಆರೈಕೆಯನ್ನು ಅದಕ್ಕೆ ಬೇಕಾದ ಮಣ್ಣು  ನೀರು ಹಾಯಿಸಿ ಜವಾಬ್ದಾರಿಯನ್ನು ಕೆಲವು ಜನರಿಗೆ ವಹಿಸಿಕೊಡಬೇಕು  ಮಹಾನಗರಪಾಲಿಕೆಯವರು ಇದರ ಬಗ್ಗೆ ಆಸಕ್ತಿ ವಹಿಸಬೇಕು. ಅದನ್ನು ವಹಿಸಿಕೊಂಡವರಿಗೆ ತಿಂಗಳಿಗೆ ಇಂತಿಷ್ಟು ವೇತನ ನಿಗದಿ ಪಡಿಸಬೇಕು  ಇದರಿಂದ ಡಿವೈಡರ್ ಮಧ್ಯೆ ಬಣ್ಣಬಣ್ಣದ ಹೂ ಬಿಟ್ಟಲ್ಲಿ ನೋಡಲು ಅಂದ ಚೆಂದ  ಪಾದಚಾರಿಗಳಿಗೆ ರಸ್ತೆ ದಾಟಲು ಡಿವೈಡರ್‍ಗಳ ಮಧ್ಯೆ ಅಲ್ಲಲ್ಲಿ ಸ್ವಲ್ಪ ಸ್ಥಳ ಖಾಲಿ ಬಿಡಬೇಕು ಇದರಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆ ದಾಟಲು ಸುಲಭವಾಗುತ್ತದೆ  ಇಲ್ಲಿ ಬೆಳೆದ ಗಿಡದ ಹೂವಿನಿಂದಲೂ ಗುತ್ತಿಗೆದಾರರಿಗೆ ಸ್ವಲ್ಪ ಅದಾಯವು ಲಭಿಸಬಹುದು

  • ಅರ್ಥರ್ ಮೆಂಡೋನ್ಸಾ, ಪುತ್ತೂರು