ಸೆಲ್ಫಿ ಹುಚ್ಚು ಅತಿರೇಕವಾಗದಿರಲಿ

ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ  ಅದರಲ್ಲೂ ಮುಖ್ಯವಾಗಿ ಯುವ ಜನತೆಯಲ್ಲಿ ತಮ್ಮ ಮೊಬೈಲ್ ಫೋನ್‍ಗಳಿಂದ  ಸೆಲ್ಫಿ  ತೆಗೆಯುವ ಹುಚ್ಚು ಜೋರಾಗಿದೆ  ಈ ರೀತಿ  ಸೆಲ್ಫಿ  ತೆಗೆಯುವ ವೇಳೆಯಲ್ಲಿ ಅನೇಕ ದುರ್ಘಟನೆ ಸಂಭವಿಸಿ ಜನ ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಂಡರೂ ಬುದ್ಧಿ ಬಂದಂತೆ ಕಾಣುತ್ತಿಲ್ಲ  ಪ್ರವಾಸಿ ತಾಣಗಳಲ್ಲಿ  ಅದರಲ್ಲೂ ಬಹು ಮುಖ್ಯವಾಗಿ ಬೆಟ್ಟ  ಗುಡ್ಡಗಳ ಬಳಿ ಅಥವಾ ನದಿ  ಸರೋವರ ಬಂಡೆ ಮೇಲೆ ನಿಂತು  ಸೆಲ್ಫಿ  ತೆಗೆಯುವ ಸಂದರ್ಭ ಪ್ರಾಣಾಪಾಯ ಹೆಚ್ಚಿನ ಪ್ರಮಾಣದಲ್ಲಿರುತ್ತದೆ  ಆದ್ದರಿಂದ ಇನ್ನು ಮುಂದಾದರೂ  ಸೆಲ್ಫಿ  ತೆಗೆಯುವ ಸಂದರ್ಭ ಜನತೆ ಅತ್ಯಂತ ಜಾಗೃತೆ ವಹಿಸುವುದು ಸೂಕ್ತ   ಸೆಲ್ಫೀ ಕ್ರೇಜ್  ಒಂದು ರೀತಿ ಅಂಟು ರೋಗದಂತೆ  ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದೆ

  • ಟಿ ಕೆ ಸಂಧ್ಯಾ ಕೋಟ್ಯಾನ್  ಕಟಪಾಡಿ-ಉಡುಪಿ