ಹೇಯಕೃತ್ಯ ಮರುಕಳಿಸದಿರಲಿ

ಮೊನ್ನೆ ಬೆಂಗಳೂರಿನಲ್ಲಿ ನಡೆದ ಅವಮಾನಕರ ಘಟನೆಗಳು ನಿಜಕ್ಕೂ ವಿಷಾದನೀಯ. ನಮ್ಮ ಭಾರತೀಯ ಸಂಸ್ಕøತಿಯನ್ನು ವಿದೇಶಿಯರು ಮೆಚ್ಚಿಕೊಳ್ಳುವರು. ಭಾರತೀಯ ಸಂಸ್ಕøತಿಯಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನವನ್ನು ಕೊಟ್ಟಂತಹ ಈ ದೇಶದಲ್ಲಿ ಇಂತಹ ಹೇಯಕೃತ್ಯದಿಂದ ಸಮಸ್ತ ನಾಗರಿಕರು ತಲೆತಗ್ಗಿಸುವಂತಾಗಿದೆ. ಅಂದಿನ ದಿವಸ ಸಂಬಂಧಿಸಿದ ಇಲಾಖೆಯವರು ಮುಂದಾಲೋಚನೆಯಿಂದ ಎಚ್ಚರಿಕೆ ವಹಿಸಬೇಕಾಗಿತ್ತು. ನೂತನ ವರ್ಷಾಚರಣೆಯಲ್ಲಿ ಭಾಗವಹಿಸುವಂತಹ ಹೆಣ್ಣು ಮಕ್ಕಳು ಎಚ್ಚರಿಕೆಯಿಂದ ಜಾಗರೂಕರಾಗಿರಬೇಕಾಗಿತ್ತು.
ಇಡೀ ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿಯೇ ನಮ್ಮ ರಾಜ್ಯದ ರಾಜಧಾನಿಯಲ್ಲಿ ನಡೆದ ಈ ಘಟನೆಯು ಕನ್ನಡಿಗರಿಗಾದ ಅಪಮಾನ. ಈ ಘಟನೆಯ ಬಗ್ಗೆ ರಾಜ್ಯ ಗೃಹಮಂತ್ರಿಗಳು ಇದು ಸಾಮಾನ್ಯ ಎಂದು ಬೇಜವಾಬ್ದಾರಿಯಿಂದ ಮಾತನಾಡಿರುವುದು ವಿಷಾದನೀಯ. ಇನ್ನು ಮುಂದಾದರೂ ಇಂತಹ ಘಟನೆಗಳು ನಡೆಯದಂತೆ ಸರಕಾರ ಹಾಗೂ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳಲಿ.

  • ಸಂಧ್ಯಾ ಸುವರ್ಣ, ಜೋಡುಕಟ್ಟೆ, ಕಾರ್ಕಳ