ರಾಜ್ಯದ ಸಂಸದರೂ ಚಳಿಗಾಲದ ಅಧಿವೇಶನ ವೇತನ ಹಿಂದಿರುಗಿಸಲಿ

ನೋಟು ರದ್ಧತಿ ಗೊಂದಲದಿಂದ ಚಳಿಗಾಲದ ಸಂಸತ್ ಅಧಿವೇಶನದ ಅಷ್ಟೂ ದಿನಗಳ ಕಾಲಕ್ಕೆ ಸರಿಯಾಗಿ ಕಲಾಪ ನಡೆಯದೆ ಎಲ್ಲರೂ ಸಂಯಮ ಮತ್ತು ಹಣ ವ್ಯರ್ಥವಾದದ್ದು ಎಲ್ಲರಿಗೂ ತಿಳಿದ ಸಂಗತಿ  ಈ ನಡುವೆ  ಒಡಿಶಾ ರಾಜ್ಯದ ಬಿಜೆಡಿ ಸಂಸತ್ ಸದಸ್ಯರು ಕಲಾಪ ವ್ಯರ್ಥಗೊಂಡಿದ್ದರಿಂದ ಅಧಿವೇಶನಕ್ಕೆಂದು ಪಡೆದ ವೇತನವನ್ನು ಸರಕಾರಕ್ಕೆ ಮರಳಿಸುವ ನಿರ್ಧಾರ ಮಾಡಿರುವುದು ಪತ್ರಿಕೆಯಲ್ಲಿ ಗಮನಿಸಿದೆ ಆ ಮೂಲಕ ಜನಪ್ರತಿನಿಧಿಯಾಗಿ ನಿಜವಾಗಿಯೂ ಜವಾಬ್ದಾರಿಯನ್ನು ಮೆರೆದಿದ್ದಾರೆ  ಇವರಂತೆ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಪಕ್ಷದ ಸಂಸತ್ ಸದಸ್ಯರೂ ತಾವು ಅಧಿವೇಶನಕ್ಕಾಗಿ ಪಡೆದ ವೇತನವನ್ನು ಸರಕಾರಕ್ಕೆ ಹಿಂದಿರುಗಿಸಲು ಮುಂದಾಗಲಿ

  • ಅಜಯ್ ಕುಮಾರ್ ಗುತ್ತಿಗಾರ್-ಸುಳ್ಯ