ಸುಪ್ರೀಂ ಕೋೀರ್ಟ್ ತೀರ್ಪು ಕಟ್ಟುನಿಟ್ಟಾಗಿ ಜಾರಿಯಾಗಲಿ

ಜನಪ್ರತಿನಿಧಿ ಕಾಯಿದೆ ಸೆಕ್ಸನ್ 123ರ ಅರ್ಥವನ್ನು ವಿಸ್ತರಿಸಿ ಯಾವ ರಾಜಕೀಯ ಪಕ್ಷವೂ ಜಾತಿ, ಭಾಷೆ, ಸಮುದಾಯ ಹಾಗೂ ಧರ್ಮದ ಹೆಸರಿನಲ್ಲಿ ಮತಯಾಚಿಸಬಾರದು ಎಂದು ಮುಂಬರುವ ಅಸೆಂಭ್ಲಿ ಚುನಾವಣೆ ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ.

ಆದರೆ ಸಂವಿಧಾನದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಅಂಶಗಳ ಉಲ್ಲೇಖವಿದ್ದರೂ ಯಾವ ರಾಜಕೀಯ ಪಕ್ಷವೂ ಇವÀನ್ನು ಪಾಲಿಸಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹಾಗೂ ಕೋರ್ಟುಗಳಿಗೆ ಆಡಿಯೋ, ವಿಡಿಯೊ ದಾಖಲೆ ಸಮೇತ ಸಾಕ್ಷ್ಯ ಸಲ್ಲಿಸಿದ್ದರೂ ಯಾರಿಗೂ ಶಿಕ್ಷೆಯಾದ ಉದಾಹರಣೆಗಳಿಲ್ಲ. ಸುಪ್ರೀಂಕೋರ್ಟ್ ತೀರ್ಪು ಈಗಲಾದರೂ ಕಟ್ಟು ನಿಟ್ಟಾಗಿ ಜಾರಿಯಾಗಲಿ.

  • ನವೀನ್ ಕೆ, ಪುತ್ತೂರು