ನೋಟು ಅಮಾನ್ಯ : ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಲಿ

ಚೆಕ್ ಮೂಲಕ ತನ್ನ ಖಾತೆಯಲ್ಲಿರುವ ತಾನು ಠೇವಣಿ ಇರಿಸಿದ ಹಣವನ್ನು ಬ್ಯಾಂಕಿನಿಂದ ಹಿಂಪಡೆಯಲು ರಿಸರ್ವ್ ಬ್ಯಾಂಕ್ ನಿರ್ಬಂಧಿಸಿರುವುದು ಪ್ರಜೆಗಳ ಮೂಲಭೂತ ಹಕ್ಕನ್ನು ಕಸಿದಂತಾಗಿದೆ.

ಕೃಷಿ ವಲಯದ ಮತ್ತು ಅಂಗಡಿ ಮುಗ್ಟಟ್ಟುಗಳ ಕೆಲಸಗಾರರು ಹೇಗೆ ವೇತನ ಪಡೆದುಕೊಳ್ಳುತ್ತಾರೆಂಬುದನ್ನು ಕೇಂದ್ರ ಹಣಕಾಸು ಸಚಿವ ಯೋಚಿಸಿಲ್ಲ. ಸಹಕಾರಿ ಸಂಘಗಳ ಮೂಲಕ ವ್ಯವಹರಿಸುತ್ತಿದ್ದ ಸ್ವಸಹಾಯ ಸಂಘದ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಕೃಷಿಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ಬೆಂಬಲಿಗರು, “ಜನರಿಗೆ ಏನೂ  ಸಮಸ್ಯೆ ಆಗಿಲ್ಲ. ದೇಶದ ಅಭಿವೃದ್ದಿಗೆ ಒಳ್ಳೆಯದಾಗುತ್ತಿದೆ !” ಎಂಬ ಕುತರ್ಕ ಮಾಡುತ್ತಿದ್ದಾರೆ.

ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿದೆ. ಸರ್ವಾಧಿಕಾರಿ ಧೋರಣೆಯ ಹಾದಿ ಹಿಡಿಯುತ್ತಿರುವ ಕೇಂದ್ರ ಸರಕಾರವು ಸಂವಿಧಾನ, ರಿಸರ್ವ್ ಬ್ಯಾಂಕ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಪ್ರಜಾವರ್ಗವನ್ನು ಶೋಷಿಸುತ್ತಿರುವುದನ್ನು ನ್ಯಾಯಾಲಯ ಖಂಡಿಸಿದೆ. ಈಗಾಗಲೇ ನೂರಕ್ಕೂ ಹೆಚ್ಚು ಪ್ರಜೆಗಳು ನೋಟು ಅಮಾನ್ಯ ಮಾಡಿದ್ದರಿಂದ ಸಾವಿಗೀಡಾಗಿದ್ದಾರೆಂಬ ವರದಿ ಪ್ರಕಟಗೊಂಡಿದೆ.

ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿದ ಗ್ರಾಹಕರು ಪರದಾಡುವ ಸ್ಥಿತಿ ಹೀನಾಯವಾಗಿದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ಕೇಂದ್ರ ಸರಕಾರ ಮೊಟಕುಗೊಳಿಸುತ್ತಿರುವುದು ಅಪ್ರಜಾಸತ್ತಾತ್ಮಕ ಧೋರಣೆಯಾಗಿದೆ.

. ಸಾಮಾನ್ಯ ಬ್ಯಾಂಕ್ ಗ್ರಾಹಕರು ಎಷ್ಟು ದಿನ ನಿರ್ಬಂಧವನ್ನು ಸಹಿಸಿಕೊಂಡಾರು ? ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವುದೊಳಿತಲ್ಲವೇ ?

  • ಪ್ರವೀಣ ಕೆ, ಮಂಗಳೂರು