ಮತದಾನದ ಚಾರಿತ್ರ್ಯಹಾಳಾಗದಿರಲಿ

ಏಳು ದಶಕಗಳಿಂದಲೂ ಒಂದಲ್ಲ ಒಂದು ರೀತಿಯ ಚುನಾವಣೆಗಳು ಮತದಾರನಿಗೆ ಎದುರಾಗಿ, ಶ್ರೀಸಾಮಾನ್ಯರ ದಿನನಿತ್ಯ ಜೀವನದಲ್ಲಿ ಸುಧಾರಣೆಗಳೇ ಆಗಿಲ್ಲ. ಬಡವ ಬಡವನೇ ಆಗುತ್ತಿದ್ದಾನೆ. ಶ್ರೀಮಂತ ಇನ್ನಷ್ಟು ಶ್ರೀಮಂತನಾಗುತ್ತಿದ್ದಾನೆ. ಬಡವ ಮತ್ತು ಶ್ರೀಮಂತರ ಮಧ್ಯೆ ಅಗಾಧ ಅಂತರ ಬೆಳೆಯುತ್ತಲೇ ಇದೆ ಇದಕ್ಕೆ ಕಾರಣವೇನೆಂದು ಆತ್ಮಾವಲೋಕನ ಮಾಡಿಕೊಂಡಾಗ, ಹಲವಾರು ಕಾರಣಗಳು ಸಾಲು ಸಾಲಾಗಿ ಮುಂದೆ ಬಂದು ನಿಲ್ಲುತ್ತದೆ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಕರ್ತವ್ಯ ಪ್ರಜ್ಞೆ ಇಲ್ಲದಿರುವುದು ಸಾಮಾಜಿಕ ಚಿಂತನೆಗಳಿಂದ ಜನನಾಯಕರು ದೂರ ಉಳಿಯುವುದು ಮತದಾರ ಚುನಾವಣೆಗೆ ಮುಂಚಿತವಾಗಿ ಅಭ್ಯರ್ಥಿ ನೀಡುವ ಪೊಳ್ಳು ಭರವಸೆಗಳಿಗೆ ಮಾರು ಹೋಗುವುದು. ಮತದಾನದ ಪಾವಿತ್ರ್ಯತೆ ತಿಳಿಯದ ಮತದಾರ ತನ್ನ ಮತವನ್ನೇ ಮಾರಿಕೊಳ್ಳುವುದು ಅಭ್ಯರ್ಥಿಯ ಭ್ರಷ್ಟಾಚಾರ ತಮ್ಮ ಜವಾಬ್ದಾರಿ ಅರಿಯದೇ ಇರುವುದು ಹೀಗೆ ಹಲವು ಕಾರಣಗಳಿವೆ ಪ್ರಜಾಪ್ರಭುತ್ವ ಸರಕಾರದಲ್ಲಿ ಒಂದು ಸಲ ಆಯ್ಕೆಯಾದರೆ ಅವನನ್ನು ಐದು ವರ್ಷಗಳ ಕಾಲದ ಅವಧಿಯಲ್ಲಿ ಕರ್ತವ್ಯ ಚ್ಯುತಿ ಉಂಟು ಮಾಡಿದರೆ ವಚನ ಭ್ರಷ್ಟನಾದರೆ ಅವನನ್ನು ಹಿಂದಕ್ಕೆ ಕರೆಸಿಕೊಳ್ಳುವ ಅಧಿಕಾರ ಮತದಾರನಿಗೆ ಇರಬೇಕು ಆಡಿದ ಮಾತಿನ ಮೇಲೆ ಕೊಟ್ಟ ಭರವಸೆ ಹುಸಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಭ್ಯರ್ಥಿಗೆ ಇರಬೇಕು ಅಭ್ಯರ್ಥಿ ತನ್ನ ಕಾರ್ಯಕ್ಷಮತೆ ಕರ್ತವ್ಯ ಪ್ರಜ್ಞೆಯನ್ನು ಸುಧಾರಿಸಿಕೊಂಡಾಗ ಸಮಾಜ ಆತನ ಕ್ಷೇತ್ರದ ಜನತೆ ಅವನನ್ನು ನಂಬುತ್ತಾರೆ ಅವನ ಪರವಾಗಿ ಜನತೆ ಮತ ಚಲಾಯಿಸುತ್ತಾರೆ  ತನ್ನ ಕ್ಷೇತ್ರದ ಎಲ್ಲಾ ಹಂತಗಳಲ್ಲಿ ಅಭಿವೃದ್ಧಿಯ ಬಗ್ಗೆ ಮತದಾರ ಮತ್ತು ಸರಕಾರದೊಡನೆ ಸಂಪರ್ಕ ಕೊಂಡಿಯಂತೆ ಕಾರ್ಯನಿರ್ವಹಿಸಿದರೆ ಅಭ್ಯರ್ಥಿ ಯಶಸ್ಸಿನ ಹಾದಿ ಹಿಡಿಯುತ್ತಾನೆ

  • ಚೇತನ್ ಕೋಟ್ಯಾನ್
    ಜೋಡುಕಟ್ಟೆ  ಕಾರ್ಕಳ

LEAVE A REPLY