ಪಡಿತರ ಚೀಟಿ ನ್ಯಾಯಯುತವಾಗಿ ವಿತರಣೆಯಾಗಲಿ

ಸಾಂದರ್ಭಿಕ ಚಿತ್ರ

ಬಿಪಿಎಲ್ ಪಡಿತರ ಚೀಟಿ ಸರಕಾರವು ಪ್ರಜಾವರ್ಗದ ಬಡತನವನ್ನು ಅಳೆಯುವ ಮಾಪನವಾಗಿದೆ. ಬಡತನ ರೇಖೆಯಲ್ಲಿರುವ ಸಾರ್ವಜನಿಕರು ಸರಕಾರದ ಉಚಿತ ಯೋಜನೆಗಳ ಫಲಾನುಭವಿಗಳಾಗಬೇಕಾದರೆ, ಬಿಪಿಎಲ್ ಪಡಿತರ ಚೀಟಿಯನ್ನು ಸಂಬಂಧಿತ ಯೋಜನೆಯ ಪರಿಶೀಲನಾ ಅಧಿಕಾರಿಗಳಿಗೆ ಸಮರ್ಪಿಸಬೇಕಾಗುತ್ತದೆ. ಬಡವರ್ಗದವರಿಗೆ ಉಚಿತ ಯೋಜನೆಗಳು ಸರಕಾರ ನೀಡುವುದು ನ್ಯಾಯ ಸಮ್ಮತವಾಗಿದೆ ಆದರೆ ರಾಜಕೀಯ ವ್ಯಕ್ತಿಗಳ ಇಲಾಖೆಯ ಅಧಿಕಾರಿಗಳ ಕೃಪೆ ಇದ್ದವರು ಯಾವುದೇ ಕೊರತೆ ಇಲ್ಲದೆ ವ್ಯವಸ್ಥಿತ ಬದುಕನ್ನು ಕಟ್ಟಿಕೊಂಡವರು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ಫಲಾನುಭವಿಗಳಾಗಿ ಸರಕಾರಕ್ಕೆ ವಂಚಿಸಿ ಬಡವರ ನ್ಯಾಯಸಮ್ಮತವಾದ ಹಕ್ಕನ್ನು ಕಸಿದಿದ್ದಾರೆ ನಾಡಹಂಚಿನ ಮನೆ ಜೋಪಡಿ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವ ಅದೆಷ್ಟೋ ಬಡ ಕುಟುಂಬಗಳಿಗೆ ಇದುವರೆಗೆ ಬಿಪಿಎಲ್ ಕಾರ್ಡು ದೊರೆತಿಲ್ಲಾ ಇವರೆಲ್ಲರೂ ಕಡು ಬಡವರಾದರೂ ಸರಕಾರದ ಯಾವೊಂದು ಯೋಜನೆಗಳು ಇವರಿಗೆ ದೊರೆಯುವುದಿಲ್ಲ ಸಾರ್ವಜನಿಕ ವಲಯದಲ್ಲಿ ಇವರೆಲ್ಲಾ ಬಡವರಾದರೂ ಸರಕಾರದ ದೃಷ್ಟಿಕೋನದಲ್ಲಿ ಶ್ರೀಮಂತರು ಸರಕಾರ ಪಡಿತರ ಚೀಟಿಗಳನ್ನು ಸಮರ್ಪಕವಾಗಿ ನ್ಯಾಯಸಮ್ಮತವಾಗಿ ವಿತರಿಸಬೇಕಾಗಿದೆ ಬಡವರ ಹಕ್ಕುಗಳನ್ನು ಕಸಿಯುವ ಸರಕಾರವನ್ನು ವಂಚಿಸುವ ಕರಗಳಿಂದ ರಕ್ಷಿಸಬೇಕಾಗಿದೆ ಸರಕಾರದ ತಾಲೂಕು ಜಿಲ್ಲಾ ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಚಿಕಿತ್ಸೆ ಪಡೆಯುವ ಸಂದರ್ಭ ಕೆಲ ರಕ್ತ ಪರೀಕ್ಷೆ ಅಂಗಾಂಗ ಪರೀಕ್ಷೆ ರಕ್ತ ಅವಶ್ಯಕತೆ ಇದ್ದಾಗ ಉಚಿತವಾಗಿ ಪಡೆಯಬೇಕಾದರೆ ಬಿಪಿಎಲ್ ಪಡಿತರ ಚೀಟಿಯ ಮೂಲ ಪ್ರತಿಯ ನೆರಳಚ್ಚು ಪ್ರತಿಯನ್ನು ಪರೀಕ್ಷಾ ಘಟಕಗಳಿಗೆ ನೀಡಬೇಕಾಗುತ್ತದೆ ಕಾರ್ಡು ಇಲ್ಲದ ಬಡ ರೋಗಿಗಳು ಸರಕಾರ ನಿಗದಿ ಪಡಿಸಿದ ಶುಲ್ಕ ಭರಿಸಬೇಕಾಗುತ್ತದೆ ಸರಕಾರಿ ಆಸ್ಪತ್ರೆಗಳನ್ನು ಬಡವರು ಭಿಕ್ಷುಕರು ವಲಸೆ ಕಾರ್ಮಿಕರು ನಿರಾಶ್ರಿತರು ಅವಲಂಬಿತರಾಗಿರುತ್ತಾರೆ ಧರ್ಮಾಸ್ಪತ್ರೆ ಬಿಟ್ಟರೆ ಅವರಿಗೆ ಬೇರೆ ದಾರಿಯೇ ಇಲ್ಲ ಇವರಲ್ಲಿ ಬಡವರೆಂದು ಸಾಕ್ಷೀಕರಿಸಲು ಬಿಪಿಎಲ್ ಕಾರ್ಡು ಇರುವುದಿಲ್ಲ ಸರಕಾರಿ ಆಸ್ಪತ್ರೆಗೆ ಶ್ರೀಮಂತ ವರ್ಗದವರು ಹೋಗುವುದಿಲ್ಲ. ಹೋದರೂ ಜಿಪುಣ ಮನೋಭಾವದವರು ಹೋಗಬಹುದೆನೋ ಸರಕಾರವು ಧರ್ಮಾಸ್ಪತ್ರೆಗಳಲ್ಲಿ ಏಲ್ಲಾ ಸೇವೆಗಳನ್ನು ಬಿಪಿಎಲ್ ಕಾರ್ಡು ಮಾನದಂಡವಾಗಿರಿಸದೆ ಸಂಪೂರ್ಣ ಧರ್ಮಾರ್ಥ ನೀಡುವುದರ ಮುಖಾಂತರ ಬಡವರಿಗೆ ಉಚಿತ ಆರೋಗ್ಯ ಭಾಗ್ಯ ಕಲ್ಪಿಸುವ ಬಗ್ಗೆ ಚಿಂತನೆ ನಡೆಸ ಬೇಕಾಗಿದೆ

  • ತಾರಾನಾಥ್ ಮೇಸ್ತ  ಶಿರೂರು