ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ

ಮಂಗಳೂರು ಜಿಲ್ಲೆಯ ಬಂಟ್ವಾಳ  ಪುತ್ತೂರು  ಸುಳ್ಯ ತಾಲೂಕುಗಳು ಸೂಕ್ಷ್ಮ ಪ್ರದೇಶವೆಂದು ಪೊಲೀಸ್ ಇಲಾಖೆ ಅಧಿಕಾರಿಗಳು ಅಂದುಕೊಂಡಿದ್ದಾರೆ. ಈ ತಾಲೂಕುಗಳಲ್ಲಿ ಕ್ಷುಲ್ಲಕ ವೈಯಕ್ತಿಕ ವಿವಾದಗಳಿಗೆ ರಾಜಕೀಯ ಬಣ್ಣ ಹಚ್ಚಿ ಕಚ್ಚಾಡುವಂತಾಗುತ್ತಿದೆ
ಆರು ತಿಂಗಳ ಅವಧಿ ಚುನಾವಣಾ ಪೂರ್ವಭಾವಿ ತಿಂಗಳುಗಳು ಎಂದೇ ವ್ಯಾಖ್ಯಾನಿಸಲಾಗುತ್ತಿದೆ ಇಲ್ಲಿನ ಕಾಂಗ್ರೆಸ್ ಸಚಿವರ ಹೇಳಿಕೆಗಳಂತೂ ಗೊಂದಲ ಸೃಷ್ಟಿಸಿದ್ದನ್ನು ಅಲ್ಲಗಳೆಯುವಂತಿಲ್ಲ. ಇನ್ನೊಂದು ಪ್ರಬಲ ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷದ ನಾಯಕರು ಕಾರ್ಯಕರ್ತರು ನಿತ್ಯವೂ ಪ್ರತ್ಯಾರೋಪ  ಪ್ರತಿಭಟನೆಯ ಮುಂಚೂಣಿಯಲ್ಲಿರುತ್ತಾರೆ ಪೊಲೀಸ್ ವರಿಷ್ಠ  ಐಜಿ ಎಸ್ಪಿ ಅಧಿಕಾರಿಗಳು ಪ್ರತಿದಿನವೂ ಒಂದಲ್ಲ ಒಂದು ತಾಲೂಕಿನ ಕೆಲವು ಗ್ರಾಮಗಳಿಗೆ ಭೇಟಿ ನೀಡುವಂತಾದರೆ ಸ್ಥಳೀಯ ಕ್ಷುಲ್ಲಕ ವಿವಾದಗಳು ಸಂಪೂರ್ಣ ಇತ್ಯರ್ಥಗೊಳ್ಳುತ್ತದೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧಿಕಾರಿಗಳು ಮೇಲಿನವರ ಆದೇಶ ಪಡೆಯಬೇಕೆ ಎಂಎಲ್‍ಎ ಹೇಳಿದಂತೆ ಕೇಳಬೇಕೆ ಪ್ರತಿಪಕ್ಷಗಳ ಟೀಕೆ ಧಮ್ಕಿಗೆ ಬಗ್ಗಬೇಕೇ ಎನ್ನುವ ಹಲವಾರು ಆಯಾಮಗಳು ಸಾಮಾಜಿಕ ಚರ್ಚೆಗೆ ಗ್ರಾಸವಾಗಿದೆ. ಸಾಮರಸ್ಯ ಜನಜೀವನವನ್ನು ಹಾಳುಗೆಡಹಲು ಹಲವಾರು ಕ್ಷುಲ್ಲಕ ಕಾರಣಗಳನ್ನು ಸೃಷ್ಟಿಸುವುದೂ ಪೊಲೀಸ್ ಇಲಾಖೆಗೆ ತಲೆನೋವಾಗುತ್ತಿದೆ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷಬೀಜ ಬಿತ್ತುವ ಅವಹೇಳನಕಾರಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ನಿಗಾವಹಿಸಬಹುದೆ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಘಟನೆಯ ಬಳಿಕ ನಿಯಂತ್ರಿಸಲಾಗದ ಕಠಿಣ ಪರಿಸ್ಥಿತಿ ಎದುರಾಗುತ್ತದೆ ಎಂಬ ಕಟು ಸತ್ಯವನ್ನು ಪೊಲೀಸ್ ಅಧಿಕಾರಿಗಳು ಮನಗಾಣಲಿ

  • ಬಿ ಕೃಷ್ಣಕುಮಾರ  ಪುತ್ತೂರು