ಮೋದಿ ಜಾತಿ ವಿರುದ್ಧವೂ ಹೋರಾಡಲಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಳ ಧನ ವಿರುದ್ಧ ಹೋರಾಡುತ್ತೇನೆ  ಪ್ರಾಮಾಣಿಕರ ಪರ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ  ಇದೇ ರೀತಿ ಜಾತಿ ತಾರತಮ್ಯ ವಿರುದ್ಧವೂ ಹೋರಾಡಲಿ  ಆರ್ಥಿಕವಾಗಿ ಸಮಾನತೆ ಕಾಣುವುದಕ್ಕಿಂತ ಮೊದಲು ಸಾಮಾಜಿಕವಾಗಿ ಮೊದಲು ಸಮಾನತೆ ಕಂಡರೆ ಆರ್ಥಿಕವಾಗಿ ಸಮಾನತೆ ಕಾಣಲು ಸಾಧ್ಯ  ಜಾತಿ ಎಂಬುದು ಕಾರುಣ್ಯಕ್ಕೆ ಹೆಸರಾದ ನಮ್ಮ ಭಾರತವನ್ನು ಹಾಳು ಮಾಡಿ ಕೊಚ್ಚೆಗುಂಡಿಗೆ ನೂಕಿದೆ  ಆಸ್ಪøಶ್ಯತೆ ಇನ್ನೂ ಇದೆ  ಮೊದಲು ಅಸ್ಪøಶ್ಯತೆ ವಿರುದ್ಧ ಸರ್ಜಿಕಲ್ ದಾಳಿ ಮಾಡಲಿ  ಆಗ ಸಂವಿಧಾನ ಮೆಚ್ಚುವಂತಹ ಕೆಲಸವಾಗುತ್ತದೆ
ಸ್ವಚ್ಛ ಭಾರತ ಆಗಲಿ  ಹಾಗೇ ಜಾತಿಯೂ ಸ್ವಚ್ಛವಾಗಲಿ

ತೋಮರ 
ಅಜ್ಜರಕಾಡು ಉಡುಪಿ