ಉಡುಪಿ ರಸ್ತೆಗೆ ತೇಪೆ ಕೆಲಸ ನಿಯತ್ತು ಇರಲಿ

ಈಗ ಉಡುಪಿ ಮುನಿಸಿಪಾಲಿಟಿ ಉಡುಪಿ ಫಲಿಮಾರು ಮಠದ ಪರ್ಯಾಯವೆಂದು ಉಡುಪಿ ಹಲವಾರು ರಸ್ತೆಗಳ ತೇಪೆ ಹಾಕುವ ಕೆಲಸ ಮಾಡುತ್ತಿದೆ. ಆದರೆ ಆ ಕೆಲಸಗಳನ್ನು ಗುತ್ತಿಗೆವಹಿಸುವವರು ಸರಿಯಾಗಿ ಮಾಡುತ್ತಿಲ್ಲ. ಡಾಮರು ಹಾಕುವಾಗ 10 ಫೀಟ್ ಇದ್ದ ರಸ್ತೆಗೆ ಬರೇ 9 ಫೀಟ್ ಅಗಲದಲ್ಲಿ ಡಾಮರು ಹಾಕಿ ರಸ್ತೆ ಬದಿ ಎತ್ತರವಾಗಿ ಜನರಿಗೆ ಸರಿಯಾಗಿ ನಡೆಯಲು ಆಗುತ್ತಿಲ್ಲ. ಇಲ್ಲಿ ಎಲ್ಲಾ ಕಡೆ ರಸ್ತೆ ಮಧ್ಯದಲ್ಲಿಯೇ ಸ್ವಾಗತ ಕಮಾನುಗಳನ್ನು ಹಾಕಿ ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. ಆ ಸ್ವಾಗತ ಗೋಪುರ ತೆಗೆದ ನಂತರ ಆ ರಸ್ತೆಯ ಹೊಂಡಗಳನ್ನು ಸರಿಯಾಗಿ ಮುಚ್ಚುವುದೇ ಇಲ್ಲ. ಅಲಂಕಾರ ಥಿಯೇಟರಿನ ಹತ್ತಿರದ ಸಿನಿಮಾದ ಫೋಸ್ಟರ್ ಹಂಚುವ ಕಂಬದ ಕೆಳಗೆ ಬಹಳ ವರ್ಷದಿಂದ ಹೊಂಡ ಬಿದ್ದು ಅದರಲ್ಲಿ ದ್ವಿಚಕ್ರ ನಾಲ್ಕು ಚಕ್ರದ ವಾಹನಗಳು ಬೀಳುತ್ತಿದೆ. ಕೆ ಎಂ ಮಾರ್ಗದ ಬದಿ ಮತ್ತು ಡಿವೈಡರುಗಳಿಗೆ ಕಪ್ಪು ಹಳದಿ ಬಣ್ಣ ಬಳಿದಿದ್ದಾರೆ. ಅದನ್ನು ಕ್ಲೀನ್ ಮಾಡದೇ ಅದರ ಮೇಲೆಯೇ ಬಣ್ಣ ಬಳಿದಿದ್ದು ಸರಿಯಾಗಿ ಇಲ್ಲ ಡಿವೈಡರ್ ಎರಡೂ ಬದಿ ಮಣ್ಣು ಮರಳು ಹಾಗೆನೇ ಇದೆ ವಿದ್ಯಾರಣ್ಯ ಮಾರ್ಗದ ತೋಡಿನಲ್ಲಿ ಕಲ್ಲು ಮಣ್ಣು ತುಂಬಿ ಅದನ್ನು ಕ್ಲೀನ್ ಮಾಡದೆ ಮತ್ತು ಗಿಡ ಗಂಟಿಗಳು ಬೆಳೆದಿದೆ ಸಂಬಂಧಪಟ್ಟವರು ಗಮನಿಸಲಿ

  • ಕೆ ಆರ್ ಪ್ರಸಾದ್  ಉಡುಪಿ

LEAVE A REPLY