ಪತಿ ಸಾವಿನ ಸುದ್ದಿ ತಾನೇ ಓದಬೇಕಾದ ದೌರ್ಭಾಗ್ಯ ಬೇರಾವ ಹೆಣ್ಣಿಗೂ ಬಾರದಿರಲಿ

ಅಪಘಾತದಲ್ಲಿ ತನ್ನ ಪತಿ ಮೃತಪಟ್ಟ ಸುದ್ದಿ ತಿಳಿದ ಬಳಿಕವೂ ಅದರಿಂದ ಸ್ವಲ್ಪವೂ ವಿಚಲಿತರಾಗದೆ ಆ ಸುದ್ದಿಯನ್ನು ಸ್ವತಃ ವಾಚಿಸಿದ ಛತ್ತೀಸಗಢದ ಸುದ್ದಿವಾಹಿನಿಯೊಂದರ ವಾರ್ತಾ ವಾಚಕಿ ಸುಪ್ರೀತ್ ಕೌರ್ ಅವರ ಆತ್ಮಸ್ಥೈರ್ಯ ಮತ್ತು ಕರ್ತವ್ಯಬದ್ಧತೆ ಅಭಿನಂದನಾರ್ಹ.
ಇಂತಹ ಕರ್ಣಕಠೋರವಾದ ಸುದ್ದಿ ಕೇಳಿಯೇ ಎಷ್ಟೋ ಹೆಣ್ಣು ಮಕ್ಕಳು ಆಘಾತಕ್ಕೆ ಒಳಗಾಗುತ್ತಾರೆ. ನಿಂತ ನಿಲುವಿನಲ್ಲೇ ಆಸ್ಪತ್ರೆಗೋ ಅಥವಾ ಮನೆಗೋ ಧಾವಿಸುತ್ತಾರೆ. ಆದರೆ ಸುಪ್ರೀತ್ ದುಃಖವನ್ನು ತಮ್ಮಲ್ಲೇ ಬಚ್ಚಿಟ್ಟುಕೊಂಡು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ, ಇದು ಅತ್ಯಂತ ನೋವಿನ ಪ್ರಸಂಗ. ಪತಿ ಸಾವಿನ ಸುದ್ದಿ ತಾನೇ ಓದಬೇಕಾದ ದೌರ್ಭಾಗ್ಯ ಬೇರ್ಯಾವ ಹೆಣ್ಣಿಗೂ ಬಾರದಿರಲಿ

  • ಕೆ ಮನೋಹರ ಕೋಟ್ಯಾನ್, ಮಂಗಳೂರು