ಮಠಗಳಲ್ಲಿ ಪಾರದರ್ಶಕ ಆಡಳಿತ ಬರಲಿ

ಹಿಂದೂ ಮಠಗಳನ್ನು ಸರಕಾರದ ಸ್ವಾಧೀನಕ್ಕೆ ತರುವುದು ಸಂತಸದ ವಿಷಯ. ಆದರೆ ಒಂದು ಧರ್ಮಕ್ಕೆ ಮಾತ್ರ ಈ ಕಾನೂನನ್ನು ಜಾರಿಗೆ ತರುವುದು ಸರಿಯಲ್ಲ. ಸಮಾನತೆ ಸಾರುವ ನಾಡಿನಲ್ಲಿ ಕೇವಲ ಹಿಂದೂ ಮಠಗಳೇ ಕಾಣಿಸುತ್ತದೆಯೇ ಎಂಬ ಟೀಕೆಗಳು ಸಹಜವಾಗಿ ಬರುತ್ತವೆ ರಾಜ್ಯದ ಒಂದೊಂದು ಪಕ್ಷದ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಮತ್ತು ಕಪ್ಪುಹಣವನ್ನು ಬಚ್ಚಿಡುವ ಸಲುವಾಗಿ ಹೊಸ ಮಠಗಳನ್ನು ಸ್ಥಾಪಿಸುವ ಜೊತೆಗೆ ಹಳೆಯ ಮಠಗಳನ್ನು ಕೂಡಾ ಅಭಿವೃದ್ಧಿಪಡಿಸುತ್ತಾ ಬಂದಿದ್ದಾರೆ. ಪ್ರಸ್ತುತ ಮಠಗಳು ನಿರ್ದಿಷ್ಟ ಸಮುದಾಯಗಳನ್ನು ತಮ್ಮತ್ತ ಸೆಳೆಯುತ್ತಾ ರಾಜಕಾರಣ ಮಾಡುವುದಕ್ಕೆ ಮತ್ತು ಹಣದ ಹುಂಡಿಗಳಂತೆ ಕಂಡುಬರುತ್ತಿದೆ ಎಲ್ಲಾ ಧರ್ಮಗಳ ಮಠಗಳು ಸರಕಾರದ ಸ್ವಾಧೀನಕ್ಕೆ ಬಂದರೆ ಖಂಡಿತಾ ಇಂತಹ ಹಲವಾರು ಹಗರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಆದರೆ ಈ ಮಠಗಳ ಆಡಳಿತ ಮತ್ತು ವ್ಯವಹಾರಗಳು ಪಾರದರ್ಶಕವಾಗಿರಬೇಕು ದೇಶದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರನ್ನೂ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲಿಸುವಂತೆ ಮಠ-ಮಾನ್ಯಗಳನ್ನೂ ಪರಿಶೀಲಿಸುವ ಅಧಿಕಾರ ಯಾಕಿಲ್ಲ ಮಠಗಳನ್ನು ಸರಕಾರಕ್ಕೆ ಸ್ವಾಧೀನಪಡಿಸುವ ಬಗ್ಗೆ ಜನಾಭಿಪ್ರಾಯಕ್ಕೆ ಬರುವುದಕ್ಕೆ ಮೊದಲೇ ಮೈಮೇಲೆ ಇರುವೆ ಬಿದ್ದಂತೆ ನಡೆದುಕೊಳ್ಳುವುದ್ಯಾಕೆ

  • ಗುರುಪ್ರಸಾದ್ ಭಟ್  ಅಂಬಲಪಾಡಿ, ಉಡುಪಿ

LEAVE A REPLY