ಜನಾರ್ದನ ಪೂಜಾರಿ ಜೆಡಿಎಸ್ ಸೇರಲಿ

ಒಂದು ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಕಾಂಗ್ರಸ್ ಎಂದರೆ ಜನಾರ್ದನ ಪೂಜಾರಿ ಎಂಬಂತಿತ್ತು. ಆದರೆ ಈಗ ಅವರನ್ನು ಸತತವಾಗಿ ಮೂಲೆ ಗೂಂಪು ಮಾಡಲು ಪ್ರಯತ್ನಿಸಲಾಗುತ್ತಿದೆ  ಮಂಗಳೂರಿನಲ್ಲಿ ಬಂದರು  ರೈಲ್ವೆ ಮತ್ತು ವಿಮಾನ ನಿಲ್ದಾಣವಿದ್ದು ಹೊರತಾಗಿ ರಸ್ತೆ ಸಾರಿಗೆ ವಿಷಯದಲ್ಲಿ ದೆಶಕ್ಕೆ ಮಾದರಿಯಾಗಿದ್ದರೂ ಇವತ್ತಿಗೂ ಮಂಗಳೂರು ರಾಷ್ಟ್ರಿಯ ಮಟ್ಟದಲ್ಲಿ 2ನೇ ದರ್ಜೆ ನಗರವಾಗಿಯೇ ಉಳಿದಿದೆ  ಅವರ ನಂತರದಲ್ಲಿ ಬಂದ ಕಾಂಗ್ರಸ್ ಮತ್ತು ಬಿಜೆಪಿ ಶಾಸಕರು ನಾನು ಹೊಡೆದಂತೆ ಮಾಡುತ್ತೇನೆ ನೀನು ಅತ್ತಂತೆ ಮಾಡು ಎಂದು ದೀರ್ಘಾವದಿ ಅಧಿಕಾರದ ಸಿಹಿ ಉಂಡು ತೇಗುತ್ತಿದ್ದಾರೆ  ಇವರಿಗೆ ಬುದ್ದಿ ಕಲಿಸಲು ಜನಾರ್ಧನ ಪೂಜಾರಿಯವರು ಜೆಡಿಎಸ್ ಸೇರಿ ಇನ್ನೊಮ್ಮೆ ಗೆದ್ದು ಜಿಲ್ಲೆಯನ್ನು ಅಭಿವೃದ್ದಿ ಪಡಿಸಲಿ

  • ಸತ್ಯರಾಜ್  ಪುತ್ತೂರು