ಮಹಿಳೆಯರ ಸ್ವಾವಲಂಬನೆಗೆ ಸಮಾಜ ಸರಕಾರ ಶ್ರಮಿಸಲಿ

ಪುರುಷ ಪ್ರಧಾನ ಸಮಾಜದಲ್ಲಿ ಶತಮಾನಗಳಿಂದಲೂ ಮಹಿಳೆಯರ ಮೇಲೆ ಮಾನಸಿಕ, ದೈಹಿಕ, ಲೈಂಗಿಕ ಹಾಗೂ ಇತರ ಹಲವು ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೇ ಇರುವುದರಿಂದ ಮಹಿಳೆಯರಿಗೆ ಬದುಕಲು ಹಕ್ಕುಗಳು ಸಿಗದೆ ನಿತ್ಯ ರೋಧನ, ಯಾತನೆಯಲ್ಲೇ ಕಷ್ಟಕರವಾದ ಜೀವನ ಸಾಗಿಸುವಂತಾಗಿದೆ. ಮಹಿಳೆಯರ ಉನ್ನತಿಗಾಗಿ ಮತ್ತು ಅವರ ರಕ್ಷಣೆಗಾಗಿ ಎಷ್ಟೇ ಕಾಯ್ದೆ ಕಾನೂನುಗಳು ಜಾರಿಯಲ್ಲಿದ್ದರೂ ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳ, ವೇಶ್ಯಾವಾಟಿಕೆ, ಅಪಹರಣ, ಆಸ್ತಿಯಲ್ಲಿ ಅಸಮಾನತೆ ಮುಂತಾಗಿ ಹಲವಾರು ಶೋಷಣೆ ನಿತ್ಯ ನಡೆಯುತ್ತಲೇ ಇವೆ. ಎಲ್ಲಿಯವರೆಗೆ ಮಹಿಳೆಯರು ಪ್ರಗತಿ ಸಾಧಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶದ ಪ್ರಗತಿ ಅಸಾಧ್ಯವೆಂಬುದನ್ನು ಸಮಾಜ ಮರೆತಂತಿದೆ. ದೇಶ ಅಭಿವೃದ್ಧಿ ಹೊಂದಬೇಕಾದರೆ ಮಹಿಳೆಯರ ಸರ್ವಾಂಗೀಣ ಪ್ರಗತಿ ಆಗಲೇಬೇಕು. ನಾಗರಿಕ ಸಮಾಜ ಮತ್ತು ಸರಕಾರಗಳು ಮಹಿಳೆಯರ ಉದ್ಧಾರ ಮತ್ತು ಸ್ವಾವಲಂಬನೆಗೆ ಶ್ರಮಿಸಲು ಯತ್ನಿಸಬೇಕು

  • ಸವಿತಾ  ಮಂಗಳೂರು