ಧೋನಿ ವಿರಾಟ್ ಮಾದರಿಯಾಗಲಿ

ಭಾರತ ಮತ್ತು ಇಂಗ್ಲೆಂಡ್ ನಡುವೆ ಕಟಕನಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಪ್ರಾಬಲ್ಯವನ್ನು ಮೆರೆದ ಭಾರತದ ಇಬ್ಬರು ಹಿರಿಯ ದಾಂಡಿಗರು ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೇರಿಸಿದ್ದಾರೆ.
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ನಡುವಿನ ತಾಳಮೇಳ ಮತ್ತು ಸಮಯಪೂರ್ವಕ ವಿಚಾರ ವಿನಿಮಯಗಳು ಭಾರತದ ವಿಜಯದಲ್ಲಿ ಮಹತ್ತರ ಪಾತ್ರ ವಹಿಸಿರುವುದನ್ನು ಉಪೇಕ್ಷಿಸಲಾಗದು. ಇದೊಂದು ಉತ್ತಮ ಬೆಳವಣಿಗೆ. ಇಂತಹ ಪರಸ್ಪರ ಸ್ನೇಹಪೂರ್ವಕ ವಿಚಾರ ವಿನಿಮಯದ ದೃಶ್ಯಗಳು ನಮ್ಮ ರಾಜ್ಯದ ಬಿಜೆಪಿ ಮುಖಂಡದ್ವಯರಿಗೆ ಮಾದರಿಯಾಗಬಾರದೇಕೆ ? ಯಡಿಯೂರಪ್ಪ ಮತ್ತು ಈಶ್ವರಪ್ಪನವರು ಜತೆಗೂಡಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಬಿಜೆಪಿಯೆಂಬ ತಂಡಕ್ಕೆ ಗೆಲುವು ದೊರಕಿಸಿಕೊಡಬಾರದೇಕೆ

  • ಕೆ ವಿ ಸೀತಾರಾಮ್
    ಬಿಜೈ-ಮಂಗಳೂರು